ಮುಂಡಗೋಡ: ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ಸಮ್ಮುಖದಲ್ಲಿ ತಾಲೂಕಿನ ಬಡ್ಡಿಗೇರಿ ಗೌಳಿ, ಸಿದ್ದಿ ಸಮುದಾಯದ 50ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಹಾಗೂ ಸಾಲಗಾಂವ ಗ್ರಾಮದ ಮಲ್ಲಿಕಾರ್ಜುನ ಮೂಲಿಮನಿ ಸೇರಿ ಹಳಿಯಾಳದಲ್ಲಿ ರವಿವಾರ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ನಮ್ಮ ನಾಯಕರಾದ ಪ್ರಶಾಂತ ದೇಶಪಾಂಡೆರವರ ನಾಯಕತ್ವ ಬೆಂಬಲಿಸಿ ಮುಂದಿನ ದಿನಗಳಲ್ಲಿ ಬಾಚಣಕಿ ಹಾಗೂ ಸಾಲಗಾಂವ ಪಂಚಾಯತ್ ವ್ಯಾಪ್ತಿಯಿಂದ ಹಲವಾರು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎಂದು ತಾಲೂಕಾ ಬ್ಲಾಕ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ ತಿಳಿಸಿದರು.
ಲಕ್ಷ್ಮಣ ಬನ್ಸೊಡೆ, ರಾಜಶೇಖರ ಹಿರೇಮಠ, ರಾಜು ಭೋವಿ, ಗೋಪಾಲ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.