• Slide
  Slide
  Slide
  previous arrow
  next arrow
 • ವಿಶ್ವದರ್ಶನ ಶಾಲೆಯಲ್ಲಿ ಧ್ಯಾನ ಶಿಬಿರ ಆರಂಭ

  300x250 AD

  ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ವಿಶ್ವದರ್ಶನ ಸೇವಾ ವತಿಯಿಂದ ಇಡಗುಂದಿಯ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಧ್ಯಾನ ಶಿಬಿರ ನಡೆಯುತ್ತಿದೆ.

  300x250 AD

  ಭಾನುವಾರ ಸಂಜೆಯಿಂದ ಈ ಶಿಬಿರ ಪ್ರಾರಂಭವಾಗಿದೆ. ಬೆಂಗಳೂರಿನ ಮಹರ್ಷಿ ವೇದ ವಿಜ್ಞಾನ ಸಂಸ್ಥೆಯ ಮುಖ್ಯಸ್ಥ ಅನಂತ ಭಟ್ಟ ಶೀಗೇಪಾಲ್ ಅವರು ಧ್ಯಾನ ತರಬೇತಿ ನೀಡುತ್ತಿದ್ದಾರೆ. ಐದು ದಿನಗಳ ಕಾಲ ಸಂಜೆ 5.30ರಿಂದ 7.30ರ ವರೆಗೆ ಧ್ಯಾನ ಶಿಬಿರ ನಡೆಯಲಿದೆ.
  ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಇಡಗುಂದಿ ಸೇವಾ ಸಹಕಾರಿ ಸಂಘದ ನಿರ್ದೇಶಕ ಪ್ರೇಮಾನಂದ ನಾಯ್ಕ ಮಾತನಾಡಿ, ಮಾನಸಿಕ ನೆಮ್ಮದಿಗೆ ಧ್ಯಾನ ಅತೀ ಮುಖ್ಯವಾಗಿದೆ ಎಂದು ಹೇಳಿದರು. ಸಾಮಾಜಿಕ ಕಾರ್ಯಕರ್ತ ವೆಂಕಟ್ರಮಣ ಬೆಳ್ಳಿ ಮಾತನಾಡಿ, ವಿಶ್ವದರ್ಶನ ಸೇವಾ ವತಿಯಿಂದ ಈಗಾಗಲೇ ಹಲವು ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. ಗ್ರಾಮೀಣ ಭಾಗದಲ್ಲಿ ಶಿಬಿರ ಆಯೋಜಿಸಿರುವುದರಿಂದ ಸ್ಥಳೀಯರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದರು. ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ರಾಜೀವ ನಾಯ್ಕ ಹಾಜರಿದ್ದರು. ವಿ.ಕೆ ಗಾಂವ್ಕರ್ ನಿರ್ವಹಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top