• first
    second
    third
    previous arrow
    next arrow
  • ಆರೋಗ್ಯಕರ ಪಾಲಕ್ ದೋಸೆ ಮಾಡಿ ಸವಿದು ನೋಡಿ

    300x250 AD

    ಅಡುಗೆ ಮನೆ: ಬೇಕಾಗುವ ಸಾಮಗ್ರಿಗಳು: 2 ಹಿಡಿಯಷ್ಟು ಪಾಲಕ್ ಸೊಪ್ಪು, 1.5 ಕಪ್ ಅಕ್ಕಿ, ಕಡಲೆಬೇಳೆ 2 ಟೇಬಲ್ ಸ್ಪೂನ್, ಉದ್ದಿನಬೇಳೆ-3 ಟೇಬಲ್ ಸ್ಪೂನ್, ಹಸಿಮೆಣಸು-8, ಕೊತ್ತಂಬರಿ ಬೀಜ 1 ಟೇಬಲ್ ಸ್ಪೂನ್, ಕಾಳುಮೆಣಸು 1 ಟೀ ಸ್ಪೂನ್, ಜೀರಿಗೆ 1 ಟೀ ಸ್ಪೂನ್, ಕಾಯಿತುರಿ-1/2 ಕಪ್, ಶುಂಠಿ ತುರಿ-1 ಟೇಬಲ್ ಸ್ಪೂನ್, ಈರುಳ್ಳಿ-1, ಇಂಗು-ಚಿಟಿಕೆ, ಬೆಲ್ಲ 2 ಟೇಬಲ್ ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ-ಸ್ವಲ್ಪ, ಹುಣಸೆಹಣ್ಣು ಲಿಂಬೆಹಣ್ಣಿನ ಗಾತ್ರದಷ್ಟು. (ನೀರಿನಲ್ಲಿ ನೆನೆಸಿಡಿ.),

    300x250 AD

    ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಗೆ ಅಕ್ಕಿ, ಉದ್ದಿನಬೇಳೆ, ಕಡಲೆಬೇಳೆಯನ್ನು ಹಾಕಿ ತೊಳೆದು ನೀರು ಹಾಕಿ 5 ಗಂಟೆಗಳ ಕಾಲ ನೆನೆಸಿಡಿ. ನಂತರ ಒಂದು ಮಿಕ್ಸಿ ಜಾರಿಗೆ ನೆನೆಸಿದ ಅಕ್ಕಿ, ಬೇಳೆ, ಬೆಲ್ಲ, ಹಸಿಮೆಣಸು, ಕೊತ್ತಂಬರಿ, ಜೀರಿಗೆ, ಕಾಳುಮೆಣಸು, ತೆಂಗಿನಕಾಯಿ ತುರಿ ಹಾಕಿ ರುಬ್ಬಿಕೊಳ್ಳಿ, ನಂತರ ಶುಂಠಿ ಹಾಕಿ ನಯವಾಗಿ ರುಬ್ಬಿಕೊಳ್ಳಿ. ಇದನ್ನು ಒಂದು ಪಾತ್ರೆಗೆ ತೆಗೆದುಕೊಳ್ಳಿ. ನಂತರ ಇದಕ್ಕೆ, ನೆನೆಸಿಟ್ಟುಕೊಂಡ ಹುಣಸೆಹಣ್ಣಿನ ರಸ ಸೇರಿಸಿ, ನಂತರ ಪಾಲಕ್ ಹಾಗೂ ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಅದನ್ನು ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ, ನಂತರ ಉಪ್ಪು, ಇಂಗು ಸೇರಿಸಿ ಮಿಶ್ರಣ ಮಾಡಿಕೊಳ್ಳಿ, ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಂಡು ತವಾ ಬಿಸಿಯಾದ ಮೇಲೆ ಮಿಶ್ರಣ ಹಾಕಿ ತೆಳುವಾಗಿ ದೋಸೆ ಮಾಡಿದರೆ ರುಚಿಯಾದ ಪಾಲಕ್ ದೋಸೆ ಸವಿಯಲು ಸಿದ್ಧ.

    Share This
    300x250 AD
    300x250 AD
    300x250 AD
    Leaderboard Ad
    Back to top