ಯಲ್ಲಾಪುರ: ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಕಾರ್ಮಿಕರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಉಂಟಾಗಿರುವ ಸಮಸ್ಯೆ ಇತ್ಯರ್ಥಕ್ಕಾಗಿ ಯಲ್ಲಾಪುರ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ರವಿವಾರ ಕಾರ್ಖಾನೆಯ ಪ್ರತಿನಿಧಿ ಹಾಗೂ ಜಂಟಿ ಸಂಧಾನ ಸಮಿತಿಯ ಸದಸ್ಯರೊಂದಿಗೆ ಕಾರ್ಮಿಕ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಸಭೆ ನಡೆಸಿ ಸುದೀರ್ಘವಾಗಿ ಈ ಕುರಿತು ಚರ್ಚೆ ನಡೆಸಿದರು.
ಈ ಸಂಧಾನ ಸಭೆಯು ಯಶಸ್ವಿಗೊಂಡಿದ್ದು ಆಡಳಿತ ಮಂಡಳಿಯವರು ವೇತನ ಪರಿಷ್ಕರಣೆಗೆ ಒಪ್ಪಿಗೆ ನೀಡಿರುವುದು ಕಾರ್ಮಿಕರ ಹಲವಾರು ವರ್ಷಗಳ ಬೇಡಿಕೆಯು ಈಡೇರಿದೆ. ಈ ಮೂಲಕವಾಗಿ ಕಾರ್ಖಾನೆಯ ಕಾರ್ಮಿಕ ವಲಯದಲ್ಲಿ ಸಂತಸ ತಂದಿದೆ, ರಾಜ್ಯದಲ್ಲಿ ಕಾರ್ಮಿಕ ಹಾಗೂ ಉದ್ಯಮಿ ಸ್ನೇಹಿ ವಾತಾವರಣವನ್ನು ನಿರ್ಮಾಣ ಮಾಡುವುದಕ್ಕೆ ನಮ್ಮ ಕಾರ್ಮಿಕ ಇಲಾಖೆ ಹಾಗೂ ರಾಜ್ಯ ಸರಕಾರ ಸದಾ ಬದ್ಧವಾಗಿದೆ ಎಂದು ಈ ಸಂದರ್ಭದಲ್ಲಿ ಸಚಿವರು ತಿಳಿಸಿದರು.