ಕುಮಟಾ: ತಾಲೂಕಿನ ಹೆಗಡೆಯ ಹಳಗೇರಿಯಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಸರಳವಾಗಿ ಆಚರಿಸಲಾಯಿತು.
24 ನೇ ವರ್ಷದ ಗಣೇಶೋತ್ಸವವನ್ನು ಸರ್ಕಾರದ ಮಾರ್ಗಸೂಚಿಯಂತೆ ಸರಳವಾಗಿ ಒಂದು ದಿನಕ್ಕೆ ಮೊಟಕುಗೊಳಿಸಿ ಶೃದ್ಧಾ ಭಕ್ತಿಯಿಂದ ಆಚರಿಸಲಾಯಿತು. ಹಿಂದಿನಿಂದಲೂ ಐದು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಿ ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ ಎರಡು ವರ್ಷದಿಂದ ಕೋವಿಡ್ ಸಮಸ್ಯೆ ಎದುರಾಗಿದ್ದರಿಂದ ಐದು ದಿನದಿಂದ ಒಂದು ದಿನಕ್ಕೆ ಮೊಟಕುಗೊಳಿಸಿ ಸರ್ಕಾರದ ಮಾರ್ಗಸೂಚಿ ಅನುಸರಿಸಿ ಸರಳವಾಗಿ ಪೂಜಿಸಿ ವಿಸರ್ಜಿಸಲಾಗಿದೆ. ಮಧ್ಯಾಹ್ನದ ಮಹಾಪೂಜೆಗೆ ಸಾರ್ವಜನಿಕರು ಮಾಸ್ಕ್ ಧರಿಸಿ ಅಂತರ ಕಾಯ್ದುಕೊಂಡು ತಮ್ಮ ಸೇವೆ ಸಲ್ಲಿಸಿ ಪುನೀತರಾದರು. ಗಣೇಶೋತ್ಸವವನ್ನು ಹಿರಿಯರಾದ ನಿವೃತ್ತ ಶಿಕ್ಷಕ ಕುಪ್ಪ ಮುಕ್ರಿ, ಗೋಪಾಲ ನಾಯ್ಕ, ರಾಮ ಮುಕ್ರಿ, ಗೋಪಾಲ ಆಚಾರಿ, ಈರು ಹಾಗೂ ಇತರರು ಸ್ಥಳೀಯರ ಸಹಕಾರದಿಂದ ಅಚ್ಚುಕಟ್ಟಾಗಿ ನಡೆಸುತ್ತ ಬಂದಿದ್ದಾರೆ.