ಶಿರಸಿ: ಆಯುಷ್ಮಾನ ಭವ, ವಿಜಯೀ ಭವ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಕ್ಷೇಮವನ್ನು ಸಂಕಲ್ಪಿಸಿ ತಾಲೂಕಿನ ಭೈರುಂಬೆಯ ಶ್ರೀ ಬಟ್ಟೆ ವಿನಾಯಕ ದೇವಸ್ಥಾನದ ಆವಾರದಲ್ಲಿ ಸೆ.12 ರವಿವಾರದಿಂದ ಸೆ.18 ಶನಿವಾರದ ವರೆಗೆ ಒಂದು ವಾರಗಳ ಕಾಲ ವೇದ ಮಾತೆಯ ಆರಾಧನೆ ನಡೆಯಲಿದೆ.
ಈ ಅಂಗವಾಗಿ ಶ್ರೀಕೃಷ್ಣ ಯಜುರ್ವೇದ ಪಾರಾಯಣ, ಪುರುಷ ಸೂಕ್ತ ಹವನ ನಡೆಯಲಿದೆ. ರವಿವಾರ ಬೆಳಿಗ್ಗೆ 7.30ಕ್ಕೆ ದೇವತಾ ಪ್ರಾರ್ಥನೆ, ಪೂರ್ವಾಂಗ ಕಾರ್ಯಕ್ರಮಗಳು ಹಾಗೂ ನಂತರ ಕೃಷ್ಣ ಯಜುರ್ವೇದ ಪಾರಾಯಣೆ ಪ್ರಾರಂಭವಾಗಲಿದೆ.
ಕೃಷ್ಣ ಯಜುರ್ವೇದ ಪಾರಾಯಣೆಯು ಶನಿವಾರದ ವರೆಗೆ ಮುಂದುವರಿಯಲಿದೆ. ಶನಿವಾರ ಬೆಳಿಗ್ಗೆ 9 ರಿಂದ ಪುರುಷ ಸೂಕ್ತ ಹವನ ಪ್ರಾರಂಭವಾಗಲಿದೆ. ಮಧ್ಯಾಹ್ನ ಪೂರ್ಣಾಹುತಿ, ಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 3.30 ರಿಂದ ಮಂಗಲ ಸಭೆ, ವೈದಿಕ ಮಂತ್ರಾಕ್ಷತೆ, ವಿಪ್ರಾಶೀರ್ವಾದ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 7975941805, 9611738442 ಸಂಪರ್ಕಿಸಬಹುದೆಂದು ಸಂಘಟನೆಯ ಪ್ರಮುಖ ಮಂಜುನಾಥ ಭಟ್ಟ ಭಟ್ರಕೇರಿ ತಿಳಿಸಿದ್ದಾರೆ.