ಮುರುಡೇಶ್ವರ: ಪ್ರವಾಸಿಗರ ಕಾರೊಂದು ಮುರುಡೇಶ್ವರ ಹೋಟೆಲ್ ಒಂದರ ಎದುರಿನ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮೃತಪಟ್ಟ ಘಟನೆ ರಾತ್ರಿ ನಡೆದಿದೆ.
ಸೆ.7ರಂದು ಯಾದಗಿರಿಯಿಂದ ಪ್ರವಾಸಕ್ಕೆ ಹೊರಟ ತಂಡ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಡಿಕೇರಿ, ಉಡುಪಿ ಕಡೆಗಳಲ್ಲಿ ಪ್ರವಾಸ ಮುಗಿಸಿ ರಾತ್ರಿ ಮುರುಡೇಶ್ವರಕ್ಕೆ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಭಟ್ಕಳ ದಾಟಿ ಬಸ್ತಿ ಮಾರ್ಗವಾಗಿ ಒಲಗ ಮಂಟಪ ದಾಟಿ ಮುರುಡೇಶ್ವರ ದೇವಸ್ತಾನದ ಕಡೆ ಹೋಗುತ್ತಿರುವಾಗ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಚಾಲಕ ಮಹೇಶ ಈತನು ಚಾಲಾಯಿಸುತ್ತಿದ್ದ ಕಾರನ್ನು ಅತಿ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಮುರುಡೇಶ್ವರ ಇಂದ್ರಪ್ರಸ್ತ ಹೋಟೆಲ್ ಎದುರಿನ ಸಿಮೆಂಟ್ ರಸ್ತೆಯ ಮಧ್ಯದಲ್ಲಿರುವ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದವರು ಸಣ್ಣ ಪುಟ್ಟ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆದರೆ, ಕಾರಿನ ಚಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಮುರುಡೇಶ್ವರ ಪೆÇಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.