ಹೊನ್ನಾವರ: ದಾರಿಯಲ್ಲಿ ಸಿಕ್ಕ 1 ಕೆ.ಜಿ ಬೆಳ್ಳಿ ಕಿರೀಟವನ್ನು ಮಾಲೀಕರಿಗೆ ಒಪ್ಪಿಸಿ ಲೋಕೇಶ್ ನಾಯ್ಕ ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ಹಡಿನಬಾಳ ಗ್ರಾಮದ ದಾಸ ಮಹಾಲೆ ಕಳೆದ 20 ವರ್ಷಗಳಿಂದ ತಮ್ಮ ಮನೆಯಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಕಿರೀಟ ತೊಡಿಸಿ ಪುಜಿಸುತ್ತಾ ಬಂದಿದ್ದಾರೆ. ಬೆಳಗಿನ ಜಾವ ಗಣಪತಿ ಮೂರ್ತಿ ತರಲು ತೆರಳುವ ಸಂದರ್ಭದಲ್ಲಿ ರಸ್ತೆಯಲ್ಲಿ ಬೆಳ್ಳಿ ಕಿರೀಟವನ್ನು ಕಳೆದುಕೊಂಡಿದ್ದರು.
ರಸ್ತೆಯಲ್ಲಿ ತೆರಳುತ್ತಿರುವ ವೇಳೆ, ಹುಡಗೋಡ ನಿವಾಸಿ ಲೋಕೇಶ ಗಣಪತಿ ನಾಯ್ಕ ಎನ್ನುವವರಿಗೆ ದಾರಿಯಲ್ಲಿ ಈ ಬೆಳ್ಳಿ ಕಿರೀಟ ಸಿಕ್ಕಿತ್ತು. ಅದನ್ನು ಇಂದು ಸಾರ್ವಜನಿಕವಾಗಿ ನಾಗರತ್ನ ಮತ್ತು ಲೋಕೇಶ ನಾಯ್ಕ ದಂಪತಿಗಳು ದಾಸ ಮಹಾಲೆಯರಿಗೆ ಒಪ್ಪಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.