ಹೊನ್ನಾವರ: ತಾಲೂಕಿನ ಹೊದ್ಯೆಶಿರೂರಿನ ವಿವಾಹಿತ ಮಹಿಳೆಯೊಬ್ಬಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ಗಂಡನ ಮನೆಗೂ ಬಂದಿಲ್ಲ. ಅತ್ತ ತಾಯಿಯ ಮನೆಗೂ ಹೋಗಿಲ್ಲ. ಈ ಸಂಬಂಧ ಹೊನ್ನಾವರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೊದ್ಯೆಶಿರೂರಿನ 23 ವರ್ಷದ ವಿವಾಹಿತ ಮಹಿಳೆಯು, ಸೆ.6ರಂದು ಹೊದೈಶಿರೂರನ ತನ್ನ ಗಂಡನ ಮನೆಯಿಂದ ಹೋದವಳು ವಾಪಸ್ಸಾಗಿಲ್ಲ. ಅಲ್ಲದೆ, ತನ್ನ ತಾಯಿಯ ಮನೆಗೂ ಹೋಗದೇ ಕಾಣೆಯಾಗಿದ್ದಾಳೆ. ಕಾಣೆಯಾದ ತನ್ನ ಮೊಮ್ಮಗಳನ್ನು ಹುಡುಕಿ ಕೊಡುವಂತೆ ಆಕೆಯ ಅಜ್ಜಿಯು ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ತನಿಖೆ ಆರಂಭಿಸಿದ್ದಾರೆ.