• Slide
    Slide
    Slide
    previous arrow
    next arrow
  • ತರಗತಿಯ ಬಾಕಿ ಸಿಲೇಬಸ್ ಬ್ರಿಡ್ಜ್ ಕೋರ್ಸ್’ನಲ್ಲಿ ಪೂರ್ಣ; ಸಚಿವ ಬಿ.ಸಿ ನಾಗೇಶ್

    300x250 AD

    ಶಿವಮೊಗ್ಗ: ಈ ವರ್ಷವೂ ಪಠ್ಯ ಕಡಿತಗೊಳಿಸದಿದ್ದರೆ ಮುಂದಿನ ತರಗತಿಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ ಬ್ರಿಡ್ಜ್ ಕೋರ್ಸ್ ಮಾಡುತ್ತಿದ್ದೇವೆ. ಸಿಲೆಬಸ್ ಪೂರ್ಣಗೊಳಿದರೆ ಮಕ್ಕಳಿಗೆ ಲಾಭ. ಮಕ್ಕಳು ಒಂದೂವರೆ ವರ್ಷ ಶಾಲೆಯಿಂದ ದೂರ ಉಳಿದಿದ್ದು, ಬಾಕಿ ಇರುವ ಸಿಲೆಬಸ್ ಅನ್ನು ಬ್ರಿಡ್ಜ್ ಕೋರ್ಸ್ ನಲ್ಲಿ ಪೂರ್ಣಗೊಳಿಸಬೇಕಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.


    ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಕರ ರಜೆ ಕಡಿಮೆ ಮಾಡಿ ಸಿಲೆಬಸ್ ಪೂರ್ಣಗೊಳಿಸುವ ಕುರಿತು ಯೋಚನೆಯಿದೆ. ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಮುಂದಿನ ದಿನಗಳಲ್ಲಿ ಶಿಕ್ಷಕರ ಸಹಕಾರ ನೋಡಿ, ಅವಶ್ಯಕತೆ ಬಿದ್ದರೆ ನಿರ್ಣಯ ಕೈಗೊಳ್ಳುತ್ತೇವೆ. ಪಠ್ಯ ಕಡಿತಗೊಳಿಸುವ ಬಗ್ಗೆ ಪ್ರಯತ್ನ ಮಾಡುತ್ತೇವೆ ಎಂದರು.

    300x250 AD


    6,7,8 ನೇ ತರಗತಿಗಳನ್ನು ನಮ್ಮ ಶಿಕ್ಷಕರು ಚೆನ್ನಾಗಿ ನಡೆಸಿದ್ದಾರೆ. ಆ ರೀತಿ ನೋಡಿ ತುಂಬ ಸಂತೋಷವಾಗಿದೆ. ಸದ್ಯದಲ್ಲೇ 1 ರಿಂದ 5 ರ ವರೆಗೆ ಶಾಲೆ ತೆರೆಯುವ ಬಗ್ಗೆ ತಾಂತ್ರಿಕ ಸಮಿತಿ ಮುಂದೆ ಚರ್ಚೆ ಮಾಡಿ, ಸಮಿತಿ ಅನುಮತಿ ನೀಡಿದ ಬಳಿಕವೇ ಆರಂಭಿಸುತ್ತೇವೆ ಎಂದರು.
    ಕೇರಳದಲ್ಲಿ ಕೋವಿಡ್ ಹೆಚ್ಚಾಗುತ್ತಿದೆ. ಮಂಗಳೂರು, ಉಡುಪಿಯಲ್ಲಿ ಕಡಿಮೆಯಾಗುತ್ತಿದೆ. ಶಾಲೆ ಪ್ರಾರಂಭ ಮಾಡಿರುವ ಸರ್ಕಾರಕ್ಕೆ ಕೋವಿಡ್ ಹೆಚ್ಚಳವಾದರೆ ತಕ್ಷಣ ನಿಲ್ಲಿಸುವ ಅವಕಾಶ ಇದೆ. ಈ ಬಗ್ಗೆ ಕೋವಿಡ್ ಹೆಚ್ಚಾದ ಸಂದರ್ಭದಲ್ಲಿ ನಿರ್ಣಯ ಕೈಗೊಳ್ಳುತ್ತೇವೆ ಎಂದು ಸಚಿವರು ಹೇಳಿದರು.


    ಶಿಕ್ಷಕರ ವರ್ಗಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಅಧ್ಯಾಪಕರು ಏಕೆ ಈ ರೀತಿ ಮಾಡುತ್ತಿದ್ದಾರೋ ಗೊತ್ತಿಲ್ಲ. ಕಳೆದ ಮೂರು ವರ್ಷದಿಂದ ಶಿಕ್ಷಕರ ವರ್ಗಾವಣೆ ನೆನೆಗುದಿಗೆ ಬಿದ್ದಿದೆ. ಮೂರು ವರ್ಷದಿಂದ ಸತತವಾಗಿ ಕೋರ್ಟ್ ಗೆ ಹೋಗಿ ತಡೆಯಾಜ್ಞೆ ತರುತ್ತಿದ್ದಾರೆ. ಹೀಗಾಗಿ ವರ್ಗಾವಣೆ ಪ್ರಕ್ರಿಯೆ ಸ್ಥಗಿತವಾಗುತ್ತಿದೆ. ಸರ್ಕಾರದಿಂದ ಅಪೀಲ್ ಹೋಗುತ್ತೇವೆ. ಸ್ಟೇ ತೆರವುಗೊಳಿಸುವ ಪ್ರಯತ್ನ ಮಾಡುತ್ತೇವೆ. ತೆರವಾಗದಿದ್ದರೆ ಉಳಿದ ವರ್ಗಕ್ಕೆ ವರ್ಗಾವಣೆ ಪ್ರಕ್ರಿಯೆ ಮಾಡುತ್ತೇವೆ ಎಂದರು.

    Share This
    300x250 AD
    300x250 AD
    300x250 AD
    Leaderboard Ad
    Back to top