ಶಿರಸಿ: ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಶ್ರಯದಲ್ಲಿ 30 ವರ್ಷ ಭೂಮಿ ಹಕ್ಕು ಹೋರಾಟ- ಒಂದು ಅವಲೋಕನ ಚಿಂತನ ಕೂಟವನ್ನ ಸೆ. 12 ಮುಂಜಾನೆ 10:30 ಕ್ಕೆ ನಗರದ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆವರಣದಲ್ಲಿ ಸಂಘಟಿಸಲಾಗಿದೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಸದ್ರಿ ಕಾರ್ಯಕ್ರಮವನ್ನು ಕಾಗೋಡ ತಿಮ್ಮಪ್ಪ ಸಾಮಾಜಿಕ ಚಿಂತಕರು ಉದ್ಘಾಟಿಸಲಿದ್ದು, ರಾಜ್ಯ ಹೋರಾಟ ಸಮಿತಿ ಪದಾಧಿಕಾರಿ ರಮೇಶ ಹೆಗಡೆ ಆಗುಂಬೆ, ತಿ.ನ.ಶ್ರೀನಿವಾಸ ಸಾಗರ, ಪ್ರಜಾಶಕ್ತಿ ಬೋರಯ್ಯ ಚಿತ್ರದುರ್ಗ, ರಾಮ ಕೆ ಕೊಡಗು, ಕುಮಾರ ಸಮತಲ ಕೊಪ್ಪಲ, ಕಂಸುಸಾಬ ಸಿದ್ಧಿ ಧಾರವಾಡ, ಶಂಕರ ಗದಗ, ಪಂಪಾವತಿ ಬಳ್ಳಾರಿ, ಕುಬೇರಪ್ಪ ಹಾವೇರಿ ಮುಂತಾದವರು ಭಾಗವಹಿಸಲಿರುವ ಕಾರ್ಯಕ್ರಮಕ್ಕೆ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಅವಲೋಕನ ಚಿಂತನ ಕೂಟದಲ್ಲಿ ಭಾಗವಹಿಸಬೇಕಾಗಿ ಕೋರಿಕೆ.
ಸದ್ರಿ ಸಭೆಯಲ್ಲಿ 30 ವರ್ಷ ಹೋರಾಟದ ಅವಲೋಕನ, ಮುಂದಿನ ಹೋರಾಟದ ರೂಪುರೇಷೆ ಹಾಗೂ ಸಂಘಟನೆಗೆ ಹೊಸ ಅಧ್ಯಕ್ಷ ಆಯ್ಕೆ ಕುರಿತು ಚಿಂತಿಸಿ ಕಾರ್ಯರೂಪ ನಿರೂಪಿಸಲಾಗುವುದೆಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.