ಸಿದ್ದಾಪುರ: ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶ್ರೀಕೃಷ್ಣ ಕ್ಲಾಥ್ ಎಂಪೋರಿಯಂ ಬಿದ್ರಕಾನ್ ಎರಡನೆಯ ವರ್ಷದ ಶ್ರೀಕೃಷ್ಣ ವೇಷದ ಆನ್-ಲೈನ್ ಸ್ಪರ್ಧೆಯನ್ನು ಆಯೋಜಿಸಿತ್ತು.
ರಾಜ್ಯದ ವಿವಿಧ ಜಿಲ್ಲೆಗಳನ್ನೂ ಒಳಗೊಂಡಂತೆ ಹೆಚ್ಚಿನ ಮಕ್ಕಳು ಭಾಗವಹಿಸಿದ್ದು, 10 ವರ್ಷದ ಒಳಗಿನ ಪುಟಾಣಿಗಳ ಶ್ರೀಕೃಷ್ಣ ವೇಷದ ಫೇಸ್-ಬುಕ್ (ಆನ್-ಲೈನ್) ಸ್ಪರ್ಧೆಯನ್ನು ಆಯೋಜಿಸಿತ್ತು. ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕವಿಲ್ಲದೆ ಉಚಿತ ಮತ್ತು ರಾಜ್ಯದ ಕನ್ನಡಿಗ ಮಕ್ಕಳಿಗೆ ಭಾಗವಹಿಸುವ ಅವಕಾಶ ನೀಡಲಾಗಿದ್ದು, 1200 ಹೆಚ್ಚು ಪುಟಾಣಿಗಳು ಭಾಗವಹಿಸಿ ಸ್ಪರ್ಧೆಯನ್ನು ಚಂದಗಾಣಿಸಿದ್ದಾರೆ.
ಲೈಕ್ ಮೂಲಕ ಹೆಚ್ಚು ವೋಟಿಂಗ್ ಪಡೆದ ಯಲ್ಲಾಪುರದ ಸಿಂಚನಾ ಭಟ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಆತ್ರೇಯ ಮಳಲಗದ್ದೆ ದ್ವಿತೀಯ, ಕುಮಟಾದ ಕುಶಾಲ್ ನಾಯ್ಕ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಸಮಾಧಾನಕರ ಬಹುಮಾನವನ್ನು ಆರ್ಯ ನೀರಕೋಣೆ, ಮಾಯ್ರ ಪ್ರಸನ್ನ ಶಿರಸಿ, ಅಮಯ್ ಶೇಟ್ ಬೆಳಗಾವಿ, ವಿರಾಜ್ ಭಟ್ ಐರ್ಲೆಂಡ್ (ಉತ್ತರ ಕನ್ನಡ ಮೂಲ), ನಿಹಿತಾ ಗಣಪತಿ ಬೋಳಗುಡ್ಡೆ ಪಡೆದುಕೊಂಡಿದ್ದಾರೆ.
ಅತಿಹೆಚ್ಚು ಲೈಕ್ ಗಳಿಸಿದ ಈ ಮಕ್ಕಳಿಗೆ ಕೋರಿಯರ್ ಮೂಲಕ ಅವರು ಗಳಿಸಿದ ಬಹುಮಾನ ತಲುಪಿಸಲಾಗುವುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ 9448649382, 9741859725, e-Mail: shrikrishnaclothemporium@gmail.com ಸಂಪರ್ಕಿಸಲು ಕೋರಿದೆ.