ಮುಂಡಗೋಡ: ಒಂದು ವೇಳೆ ಈಗಿನ ಮುಖ್ಯಮಂತ್ರಿ ನಮ್ಮ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ನೀಡಿದರೆ ನಮ್ಮ ಮಠದಲ್ಲಿ ಚೆನ್ನಮ್ಮ ಪೆÇೀಟೋದ ಪಕ್ಕದಲ್ಲಿ ಬಸವರಾಜ ಬೊಮ್ಮಯಿ ಅವರ ಪೆÇೀಟೋ ಹಾಕುತ್ತೇನೆ ಎಂದು ಲಿಂಗಾಯತ ಪಂಚಮಸಾಲಿ ಕೂಡಲಸಂಗಮ ಮಹಾ ಪೀಠದ ಬಸವಜಯಮೃತ್ಯುಂಜಯ ಮಹಾಸ್ವಾಮೀಜಿ ಹೇಳಿದರು.
ಅವರು ತಾಲೂಕಿನ ಹುನಗುಂದ ಗ್ರಾಮದ ವಿರಕ್ತ ಮಠದಲ್ಲಿ ಜಾಗೃತ ಅಭಿಯಾನದ ಸಭೆಯಲ್ಲಿ ಮಾತನಾಡುತ್ತಿದ್ದರು, ಹಿಂದಿನ ಮುಖ್ಯಮಂತ್ರಿಗಳು 2ಎ ಮೀಸಲಾತಿ ನೀಡಲು ನೀಡಿದ ಗಡವು ಸಪ್ಟೆಂಬರ್ 15ಕ್ಕೆ 6 ತಿಂಗಳು ಮುಗಿಯಲು ಬರುತ್ತಿದೆ. ವಿಧಾನಸೌಧದಲ್ಲಿ ಕೊಟ್ಟ ಮಾತಿಗೆ ಸರಕಾರದ ಗಮನ ಸೆಳೆಯಲು ಹಾಗೂ ಸಮುದಾಯವನ್ನು ಜಾಗೃತ ಗೊಳಿಸಲು ಈ ಅಭಿಯಾನ ಇಟ್ಟುಕೊಂಡಿದ್ದೇವೆ.
ನಾವು ಜಿಲ್ಲೆಯಲ್ಲಿರುವ ಪಂಚಮಸಾಲಿ ಲಿಂಗಾಯತ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ಕೆಲವರು ಉಳವಿ ಚೆನ್ನಬಸವನಿಗೆ ಪಾದಯಾತ್ರೆ ಮಾಡುತ್ತಾರೆ ಕುಟುಂಬದ ಒಳಿತಿಗೆ ಆದರೆ ನಮ್ಮ ಪಾದ ಯಾತ್ರೆ ಪಂಚಮಸಾಲಿ ಲಿಂಗಾಯತ ಸಮುದಾಯದ ಉದ್ಧಾರಕ್ಕಾಗಿ ಆಗಿದೆ. ಹಿಂದೆ ನಮ್ಮ ಸಮುದಾಯದ ಹಿರಿಯರು ಮಾಡಿದ ಸಣ್ಣ ತಪ್ಪಿನಿಂದ ನಮ್ಮ ಸಮುದಾಯಕ್ಕೆ ಮೀಸಲಾತಿ ತಪ್ಪಿತ್ತು ಹಾಗಾಗಿ ನಮ್ಮ ಮಕ್ಕಳಿಗೆ ಸರಕಾರಿ ಹುದ್ದೆ ಮತ್ತು ಉನ್ನತ ಶಿಕ್ಷಣದಲ್ಲಿ ಪ್ರವೇಶಾತಿಯಲ್ಲಿ ಅವಕಾಶ ತಪ್ಪಿದೆ ಅದು ಮತ್ತೆ ಮರುಕಳಿಸುವುದು ಬೇಡ.
ಲಿಂಗಾಯತ ಸಮಾಜದಲ್ಲಿ ಸಣ್ಣ ಪುಟ್ಟ ಪಂಗಡಗಳು ನಮ್ಮನ್ನು ರಾಜಕೀಯವಾಗಿ ಬಳಸಿಕೊಂಡಿದ್ದು ನಮಗೆ ಸಂಘಟನೆ ಮಾಡಲು ಬಿಟ್ಟಿರಲಿಲ್ಲ ನಮ್ಮಿಂದ ಎಲ್ಲಾ ಪಡೆಸುಕೊಂಡು ನಮಗೆ ಮಾತ್ರ ಏನೂ ನೀಡಲಿಲ್ಲ. ನಮ್ಮ ಮಕ್ಕಳಿಗೆ ವಿಧ್ಯಾಭ್ಯಾಸ ಹಾಗೂ ಉದ್ಯೋಗದಲ್ಲಿ ನಮಗೆ ಮೀಸಲಾತಿ ಬೇಕು ಇದನ್ನು ಪಡೆಯಲು ನಾವು ಹೋರಾಟದ ಮಾರ್ಗ ಆಯ್ದುಕೊಂಡಿದ್ದು ಅನಿವಾರ್ಯ ನಾವು ಇದನ್ನು ಮಾಡಿದರು ಕೆಲವರಿಗೆ ಮನಸ್ಸು ಕರಗುತ್ತಿಲ್ಲ ಕನಿಕರ ಬರುತ್ತಿಲ್ಲಾ. ನಾವು ಬ್ಲಾಕ್ ಮೇಲ್ ತಂತ್ರದ ಮೂಲಕ ನಮ್ಮ ಸಮುದಾಯದ ಸಂಘಟನೆ ಮಾಡುವ ಕೇಲಸ ಮಾಡುತ್ತಿಲ್ಲ ದೇಶದಲ್ಲಿ ರೈತನಿಗೆ ನಷ್ಟವಾದರೆ ದೇಶಕ್ಕೆ ನಷ್ಟ. ಲಿಂಗಾಯತ ಪಂಚಮಸಾಲಿಗಳು ಕೃಷಿ ಆಧಾರಿತ ಸಮುದಾಯವಾಗಿದೆ.
ಒಂದು ವೇಳೆ ಹಿಂದಿನ ಮುಖ್ಯಮಂತ್ರಿಗಳು ಕೊಟ್ಟ ಮಾತು ಮರೆತರೆ ಹಾಗೂ ಈಗಿನ ಮುಖ್ಯಮಂತ್ರಿಗಳು ನಮ್ಮ ಬೇಡಿಕೆ ಈಡೇರಿಸದೆ ಹೋದರೆ ಅಕ್ಟೋಬರ್ 1 ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳುತ್ತೇವೆ. ಅಂದು ಮುಂಡಗೋಡ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಜನ ಬರಬೇಕು ಎಂದು ಬಸವಜಯಮೃತ್ಯುಂಜಯ ಮಹಾಸ್ವಾಮೀಜಿ ಕರೆ ನೀಡಿದರು.
ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕುಟ್ರಿ, ಮುಖಂಡರುಳಾದ ಬಸಪ್ಪ ಬಿಸನಳ್ಳಿ,, ಸಿದ್ದು ಹಡಪದ, ಈಶ್ವರ ಗೌಡ ಸೇರಿದಂತೆ ಪಂಚಮಸಾಲಿ ಲಿಂಗಾಯತ ಮುಖಂಡರುಗಳು ಉಪಸ್ಥಿತರಿದ್ದರು.