• first
    second
    third
    previous arrow
    next arrow
  • ಸೆ.13ಕ್ಕೆ ಮುಂಡಗೋಡದಲ್ಲಿ `ಅರಣ್ಯವಾಸಿಗಳ ಸಮಸ್ಯೆ ಅದಾಲತ್’

    300x250 AD

    ಮುಂಡಗೋಡ: ತಾಲೂಕಾದ್ಯಂತ ಅರಣ್ಯವಾಸಿಗಳ ಸಮಸ್ಯೆಗಳನ್ನು ಸ್ಫಂದಿಸುವ ದಿಶೆಯಲ್ಲಿ ಸೆ.13 ಸೋಮವಾರ ಮುಂಜಾನೆ 10:30 ಕ್ಕೆ ಮುಂಡಗೋಡ ತಾಲೂಕಿನ ಅರಣ್ಯಾಧಿಕಾರಿಗಳೊಂದಿಗೆ `ಅರಣ್ಯವಾಸಿಗಳ ಸಮಸ್ಯೆಗಳ ಅದಾಲತ್’ ಸಂಘಟಿಸಲು ನಿರ್ಧರಿಸಲಾಗಿದೆ ಎಂದು ತಾಲೂಕಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಶಿವಾನಂದ ಜೋಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ತಾಲೂಕಾದ್ಯಂತ ಅರಣ್ಯ ಹಕ್ಕು ಕಾಯಿದೆ ಅನುಷ್ಠಾನ ಮತ್ತು ಅರಣ್ಯ ಇಲಾಖೆಯಿಂದ ಅರಣ್ಯವಾಸಿಗಳಿಗೆ ಸಮಸ್ಯೆ ಉಂಟಾಗುತ್ತಿದ್ದು, ಅರಣ್ಯವಾಸಿಗಳ ಸಮಸ್ಯೆಯನ್ನು ಸ್ಪಂದಿಸುವ ದಿಶೆಯಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ತಾಲೂಕಾ ಮಟ್ಟದ `ಅರಣ್ಯವಾಸಿಗಳ ಸಮಸ್ಯೆಗಳ ಅದಾಲತ್’ ಅನ್ನು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಸಂಘಟಿಸಿರುವುದು ವಿಶೇಷವಾಗಿದೆ ಎಂದು ತಿಳಿಸಿದ್ದಾರೆ.

    300x250 AD

    ಸದ್ರಿ ಅದಾಲತ್‍ಗೆ ಇಗಾಗಲೇ ಅರಣ್ಯ ಇಲಾಖೆಯ ಅರಣ್ಯ ಅಧಿಕಾರಿಗಳ ಸಹಕಾರ ಕುರಿತು ಪತ್ರ ಬರೆಯಲಾಗಿದ್ದು, ಆಸಕ್ತ ಸಮಸ್ಯೆಗಳಿರುವ ಅರಣ್ಯವಾಸಿಗಳು ಅಂದು ಮುಂಜಾನೆ 10:30 ಕ್ಕೆ ಮುಂಡಗೋಡ ಅರಣ್ಯ ಕಛೇರಿ ಎದುರು ಹಾಜರಿರಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

    Share This
    300x250 AD
    300x250 AD
    300x250 AD
    Leaderboard Ad
    Back to top