ಬೆಂಗಳೂರು: ಗೌರಿ, ಗಣೇಶ ಹಬ್ಬದ ಪ್ರಯುಕ್ತ ಕೆಎಸ್‍ಆರ್‍ಟಿಸಿಯ ಬೆಂಗಳೂರು ಕೇಂದ್ರ ಕಚೇರಿಯು ಹೆಚ್ಚುವರಿ ಬಸ್‍ಗಳ ವ್ಯವಸ್ಥೆಯನ್ನು ಪ್ರಯಾಣಿಕರಿಗೆ ಒದಗಿಸಿ ಕೊಟ್ಟಿದೆ.
ಬೆಂಗಳೂರು ನಗರದಿಂದ ಬೇರೆ ಬೇರೆ ಕಡೆಗಳಿಗೆ ಹೆಚ್ಚುವರಿ ಬಸ್ಸುಗಳ ಅನುಕೂಲ ಕಲ್ಪಿಸಲಾಗಿದ್ದು, ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳುವಂತೆಯೂ ಸೂಚಿಸಿದೆ. ಸೆ. 8 ಮತ್ತು ಸೆ. 9 ರಂದು ಬೆಂಗಳೂರು ನಗರದಿಂದ 1000 ಹೆಚ್ಚುವರಿ ಬಸ್ಸುಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಈ ಬಸ್ಸುಗಳಲ್ಲಿ ಆಸನಗಳನ್ನು ಮುಂಗಡವಾಗಿ ಕಾಯ್ದಿರಿಸುವ ಅವಕಾಶ ಸಹ ನೀಡಲಾಗಿದೆ. ಪ್ರಯಾಣಿಕರು ಇ- ಟಿಕೆಟ್‍ಗಳನ್ನು http://ksrtc.karnataka.gov.in ವೆಬ್ಸೈಟ್‍ಗೆ ಭೇಟಿ ನೀಡುವ ಮೂಲಕ ಬುಕ್ ಮಾಡಬಹುದಾಗಿದೆ. ಜನರು ರಾಜ್ಯ, ಅಂತರ್‍ರಾಜ್ಯದಲ್ಲಿ ಇರುವ 685 ಗಣಕೀಕೃತ ಬುಕ್ಕಿಂಗ್ ಕೌಂಟರ್‍ಗಳ ಮೂಲಕವೂ ಟಿಕೆಟ್ ಕಾಯ್ದಿರಿಸಬಹುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯ, ಅಂತರಾಜ್ಯಗಳಿಗೆ ಈ ಹೆಚ್ಚುವರಿ ಬಸ್ಸುಗಳ ಅನುಕೂಲವನ್ನು ಕೆಎಸ್‍ಆರ್‍ಟಿಸಿಯು ಒದಗಿಸಿ ಕೊಟ್ಟಿದೆ.