ಮುಂಡಗೋಡ: ಪೊಲೀಸ್ ಇನ್ಸ್ಪೆಕ್ಟರಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಭುಗೌಡ ಕಿರದಳ್ಳಿ ಅವರು ಡಿವೈಎಸ್ಪಿಯಾಗಿ ಪದೋನ್ನತಿಯೊಂದಿಗೆ ಬಾಗಲಕೋಟೆಗೆ ವರ್ಗಾವಣೆ ಮಾಡಿ ಪೊಲೀಸ್ ಮಹಾನೀರಿಕ್ಷಕರು ಆದೇಶ ಹೊರಡಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಭುಗೌಡ ಕಿರದಳ್ಳಿ ಅವರು ಉತ್ತಮವಾಗಿ ಕರ್ತವ್ಯ ನಿಭಾಯಿಸಿದ್ದಾರೆ. ಇದೀಗ ಅವರಿಗೆ ಡಿವೈಎಸ್ಪಿಯಾಗಿ ಬಡ್ತಿ ಹೊಂದಿದ್ದು ಬಾಗಲಕೋಟೆ ಡಿಸಿಆರ್‌ಬಿ ವಿಭಾಗಕ್ಕೆ ವರ್ಗಗೊಂಡಿದ್ದಾರೆ.