• Slide
    Slide
    Slide
    previous arrow
    next arrow
  • ಲಯನ್ಸ ಬಳಗದಿಂದ ಅರ್ಥಪೂರ್ಣ ಶಿಕ್ಷಕರ ದಿನಾಚರಣೆ

    300x250 AD

    ಶಿರಸಿ: ಲಯನ್ಸ ಕ್ಲಬ್, ಲಿಯೋ ಕ್ಲಬ್ ಗಳು ಹಾಗೂ ಶಿರಸಿ ಲಯನ್ಸ ಶಿಕ್ಷಣ ಸಂಸ್ಥೆ ಜಂಟಿಯಾಗಿ ಶಿಕ್ಷಕ ದಿನಾಚರಣೆಯನ್ನು ನಿವೃತ್ತ ಆದರ್ಶ ಶಿಕ್ಷಕರಿಗೆ ಗೌರವ ಸಮರ್ಪಣೆ ಹಾಗೂ ಲಯನ್ಸ್ ಶಾಲೆಯ ಶಿಕ್ಷಕ ಶಿಕ್ಷಕೇತರ ವೃಂದಕ್ಕೆ ಸನ್ಮಾನಿಸುವುದರ ಮೂಲಕ ಅರ್ಥಪೂರ್ಣವಾಗಿ ನಗರದ ಲಯನ್ಸ್ ಶಾಲೆಯಲ್ಲಿ ಆಚರಿಸಿದರು.


    ಕಾರ್ಯಕ್ರಮದಲ್ಲಿ ಸಿದ್ದಾಪುರ ತಾಲೂಕಿನ ಸರಕುಳಿ ಪ್ರೌಢ ಶಾಲೆಯಲ್ಲಿ ಸುದೀರ್ಘವಾಗಿ ಸೇವೆಗೈದು ಮುಖ್ಯ ಉಪಾಧ್ಯಾಯರಾಗಿ ನಿವೃತ್ತರಾದ ಬಹುಮುಖ ಪ್ರತಿಭೆ ಜಿ.ಆರ್.ಭಾಗವತರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ಅವರು ಲಯನ್ಸ ಸಂಸ್ಥೆಯ ಶಿಕ್ಷಣ ಕ್ಷೇತ್ರದಲ್ಲಿಯ ಸಾಧನೆಗಳನ್ನು ಪ್ರಶಂಸಿದರು, ಲಯನ್ಸ ಶಿಕ್ಷಕರ, ಲಯನ್ಸ ಮಕ್ಕಳ ಸಾಧನೆಗಳನ್ನು ಕೊಂಡಾಡಿ, ಲಯನ್ಸ ಶಾಲೆಯ ಅಭಿವೃದ್ಧಿಗೆ 25,000 ದೇಣಿಗೆ ಸಹ ನೀಡಿದರು.


    ನಂತರ ಲಯನ್ಸ ಶಾಲೆಯ ಎಲ್ಲ ಶಿಕ್ಷಕರನ್ನು, ಶಿಕ್ಷಕೇತರ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಅಂತೆಯೇ ಈ ಬಾರಿ ವಿವಿಧ ವಿಷಯಗಳಲ್ಲಿ ನೂರಕ್ಕೆ ನೂರು ಗಳಿಸಿಕೊಡಲು ಶ್ರಮವಹಿಸಿ ಯಶಸ್ಸುಗಳಿಸಿದ ಹತ್ತನೇ ತರಗತಿಯ ಎಲ್ಲಾ ವಿಷಯ ಶಿಕ್ಷಕರನ್ನು ವಿಶೇಷ ಬಹುಮಾನದೊಡನೆ ಸನ್ಮಾನಿಸಲಾಯಿತು.

    300x250 AD


    ಲಯನ್ಸ್ ಶಾಲೆಯ ಶಿಕ್ಷಕಿ ಮುಕ್ತಾ ನಾಯಕ್ ಅನಿಲ ಅಬ್ಬಿ ಸ್ಮಾರಕ ಉತ್ತಮ ಶಿಕ್ಷಕ ದತ್ತಿನಿಧಿ ಪ್ರಶಸ್ತಿಗೆ ಭಾಜನರಾದರು. ಲಯನ್ಸ ಪ್ರೌಢಶಾಲೆಯ ಮುಖ್ಯ ಉಪಾಧ್ಯಾಯ ಶಶಾಂಕ ಹೆಗಡೆಯವರನ್ನು ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಅವರ ಕೊಡುಗೆಯನ್ನು ಗುರುತಿಸಿ ವಿಶೇಷವಾಗಿ ಸನ್ಮಾನಿಸಲಾಯಿತು.


    ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಲ.ಎನ್.ವಿ.ಜಿ ಭಟ್ ರವರು ಶಿಕ್ಷಕರನ್ನು ಅಭಿನಂದಿಸುವದರೊಂದಿಗೆ ಸಂಸ್ಥೆಗೆ ರೂ.2 ಲಕ್ಷ 15 ಸಾವಿರ ರೂಪಾಯಿ ಶಾಲೆಯ ವಿಧದ ಉತ್ತಮ ಕಾರ್ಯಗಳಿಗಾಗಿ ದೇಣಿಗೆ ನೀಡಿದರು. ವಿಶೇಷವಾಗಿ ಶಿಕ್ಷಕರ ಕಲ್ಯಾಣ ನಿಧಿ ವಾರ್ಷಿಕವಾಗಿ ಲಯನ್ಸ್ ಉತ್ತಮ ಶಿಕ್ಷಕ ಪ್ರಶಸ್ತಿಗಾಗಿ ಈ ದೇಣಿಗೆ ನೀಡಲಾಯಿತು.

    ಲಯನ್ಸ್ ಅಧ್ಯಕ್ಷ ಎಂ ಜೆ ಎಫ್ ಲ.ಉದಯ ಸ್ವಾದಿಯವರು ಸ್ವಾಗತಿಸಿದರು. ಖಜಾಂಚಿ ಲ. ಅನಿತಾ ಧ್ವಜವಂದನೆ ಮಾಡಿದರು. ಲಯನ್ಸ್ ಶಾಲಾ ವಿದ್ಯಾರ್ಥಿಗಳು ಸ್ಟಾಗತ ಗೀತೆಯನ್ನು, ಶಿರಸಿ ಮಹಿಳಾ ಸದಸ್ಯರು ಗುರುನಮನ ಗೀತೆಯನ್ನು ಪ್ರಸ್ತುತಪಡಿಸಿದರು. ಲ. ಶ್ರೀಕಾಂತ್ ರವರು ಅತಿಥಿ ಪರಿಚಯಿಸಿದರು, ಲಯನ್ಸ್ ಕಾರ್ಯದರ್ಶಿ ಲ.ವಿನಯ ಹೆಗಡೆ ಧನ್ಯವಾದ ಸಮರ್ಪಿಸಿದರೆ, ಲ ರಮಾ ಪಟವರ್ಧನ ಹಾಗೂ ಲ.ಜ್ಯೋತಿ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಶಿರಸಿ ಲಯನ್ಸ್ ಬಳಗದ ಸದಸ್ಯರು, ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಲಯನ್ ಪ್ರೊ.ರವಿ ನಾಯಕ್, ಉಪಾಧ್ಯಕ್ಷರಾದ ಎಂ.ಜೆ.ಎಫ್.ಲಯನ್ ಪ್ರಭಾಕರ ಹೆಗಡೆ, ಶಿರಸಿ ಲಿಯೋ ಪದಾಧಿಕಾರಿಗಳು, ಶಾಲಾ ವಿದ್ಯಾರ್ಥಿವೃಂದ ಈ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಯಿತು ಎಂದು ಲಯನ್ಸ ಕ್ಲಬ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top