• first
    second
    third
    previous arrow
    next arrow
  • ಪಶ್ಚಿಮ ಘಟ್ಟದಲ್ಲಿ 1,400 ಕಿರು ಜಲಾಶಯ ಸ್ಥಾಪನೆ; ಸಚಿವ ಮಾಧುಸ್ವಾಮಿ

    300x250 AD

    ಕಾರವಾರ: ಪಶ್ಚಿಮ ಘಟ್ಟದ ಅರಣ್ಯ ಭೂಮಿ ಬಳಸದೇ, 1,400 ಕಿರು ಜಲಾಶಯಗಳನ್ನು ಪಶ್ಚಿಮ ಘಟ್ಟದ ತಳಭಾಗದಲ್ಲಿ ನಿರ್ಮಿಸಲಾಗುವುದು. ಇದರಿಂದ ಸೂಕ್ಷ್ಮ ಪರಿಸರಕ್ಕೆ ಧಕ್ಕೆಯಾಗುವುದಿಲ್ಲ ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಮಾಧುಸ್ವಾಮಿ ಹೇಳಿದರು.
    ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪಶ್ಚಿಮ ಘಟ್ಟಗಳ ಮೇಲಿನಿಂದ ಹರಿದು ಬರುವ ನದಿಗಳಲ್ಲಿ ಎರಡು, ಮೂರು ಮೀಟರ್ ಎತ್ತರದ ಕಿರು ಜಲಾಶಯಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಪ್ರತಿ ಜಲಾಶಯದಿಂದ 50-60 ಎಕರೆ ಜಮೀನಿಗೆ ನೀರಾವರಿ ಮಾಡಲು ಸಾಧ್ಯವಿದೆ. ಅಗತ್ಯವಿದ್ದವರು ಬಳಕೆ ಮಾಡಿಕೊಳ್ಳಲು ಸಾಧ್ಯವಾಗಲಿದೆ’ ಎಂದು ಸಮರ್ಥಿಸಿಕೊಂಡರು.

    ಪಶ್ಚಿಮ ಘಟ್ಟದಲ್ಲೇ ಕಾಮಗಾರಿ ಮಾಡಲಾಗುತ್ತದೆ ಎಂದು ತಪ್ಪಾಗಿ ಅರ್ಥೈಸಲಾಗಿದೆ. ಕಾಡಿನ ನಡುವೆ ಕಾಮಗಾರಿಗೆ ಕಾನೂನು ತೊಡಕುಗಳಿವೆ. ನೀರು ಹರಿಯುವ ಪ್ರದೇಶದಲ್ಲೇ ಜಲಾಶಯಗಳನ್ನು ನಿರ್ಮಿಸಲಾಗುವುದು, ಯಾವುದೇ ಪರಿಸರ ಸೂಕ್ಷ್ಮ ಅಂಶಗಳಿಗೆ ತೊಂದರೆಯಾಗುವುದಿಲ್ಲ ಎಂದು ಪ್ರತಿಪಾದಿಸಿದರು.

    300x250 AD

    ಕೇಂದ್ರ ಸರ್ಕಾರದ ಸಹಾಯದೊಂದಿಗೆ 3,500 ಕೋಟಿ ರೂಪಾಯಿ ವೆಚ್ಚದಲ್ಲಿ ಪಶ್ಚಿಮ ಘಟ್ಟವಿರುವ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಯೋಜನೆ ಜಾರಿ ಮಾಡುವ ಬಗ್ಗೆ ಸಚಿವ ಮಾಧುಸ್ವಾಮಿ ಈ ಹಿಂದೆ ಹೇಳಿದ್ದರು. ಈ ಬಗ್ಗೆ ಪರಿಸರ ವಾದಿಗಳು, ತಜ್ಞರು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಾಮಗಾರಿ ಎಷ್ಟು ಸಮಂಜನ ಎಂದು ಪ್ರಶ್ನಿಸಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top