• Slide
    Slide
    Slide
    previous arrow
    next arrow
  • 30 ವರ್ಷ ಹೋರಾಟ-30 ಸಾವಿರ ಗಿಡ: 50 ಸಾವಿರಕ್ಕೂ ಹೆಚ್ಚು ಗಿಡ ನೆಟ್ಟು ಉತ್ತಮ ಸ್ಪಂದನೆ

    300x250 AD

    ಯಲ್ಲಾಪುರ: ಅರಣ್ಯ ಭೂಮಿ ಹಕ್ಕು ಹೋರಾಟವು 30 ವರ್ಷ ಜರುಗಿರುವ ಹಿನ್ನೆಲೆಯಲ್ಲಿ, 30 ಸಾವಿರ ಗಿಡ ನೆಡುವ ವಿನೂತನ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಅರಣ್ಯವಾಸಿಗಳಿಂದ ಉತ್ತಮ ಸ್ಪಂದನೆ ದೊರಕಿದ್ದು, ಪ್ರಸಕ್ತ ವರ್ಷದ ಮಳೆಗಾಲದಲ್ಲಿ ಇಂದಿನವರಿಗೆ ಜಿಲ್ಲೆಯಲ್ಲಿ 50 ಸಾವಿರಕ್ಕೂ ಮಿಕ್ಕಿ ದೀರ್ಘಕಾಲದ ಗಿಡನೆಟ್ಟು ಪರಿಸರ ಪೂರಕ ಕಾರ್ಯ ಅರಣ್ಯವಾಸಿಗಳಿಂದ ಜರುಗಿರುವುದು ವಿಶೇಷವೆಂದು ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

    `30 ವರ್ಷ ಹೋರಾಟ- 30 ಸಾವಿರ ಗಿಡ’ ನೆಡುವ ಕಾರ್ಯಕ್ರಮವನ್ನ ಜುಲೈ 18 ರಂದು ಭಟ್ಕಳದಲ್ಲಿ ಪ್ರಾರಂಭಿಸಿ ಇಂದಿನವರೆಗೆ ಜಿಲ್ಲಾದ್ಯಂತ ವಾಸ್ತವ್ಯ ಮತ್ತು ಸಾಗುವಳಿಗಾಗಿ ಅರಣ್ಯ ಭೂಮಿ ಅವಲಂಬಿತವಾಗಿರುವ ಅರಣ್ಯವಾಸಿಗಳು ಪರಿಸರಪರ ಕಾರ್ಯಯೋಜನೆಯಡಿಯಲ್ಲಿ ತೋಡಗಿರುವುದಕ್ಕೆ ಅವರು ಇಂದು ಪತ್ರಿಕಾ ಪ್ರಕಟಣೆಯ ಮೂಲಕ ಹರ್ಷ ವ್ಯಕ್ತಪಡಿಸಿದರು.

    300x250 AD

    ಉತ್ತರಕನ್ನಡ ಜಿಲ್ಲೆಯಲ್ಲಿ ವಿವಿಧ ಜಲ ವಿದ್ಯುತ್ ಯೋಜನೆ, ರಾಷ್ಟ್ರೀಯ ಅಭಿವೃದ್ಧಿ ಕಾಮಗಾರಿ, ಅರಣ್ಯಕ್ಕೆ ಬೆಂಕಿ, ವಿವಿಧ ರೋಗ ಮತ್ತು ಜಲಪ್ರವಾಹಗಳಿಂದ ಅರಣ್ಯ ಪ್ರದೇಶದ ಸಾಂಧ್ರತೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಸಾಂಧ್ರತೆ ಹೆಚ್ಚಿಸುವ ಕಾರ್ಯದಲ್ಲಿ ಅರಣ್ಯವಾಸಿಗಳು ತೊಡಗಿಕೊಂಡಿರುವುದು ವಿಶೇಷವಾಗಿದೆ ಎಂದು ಅವರು ಹೇಳಿದರು.

    ಅರಣ್ಯವಾಸಿಗಳು ಪರಿಸರ ಪೂರಕ: ಅರಣ್ಯವಾಸಿಗಳಿಂದ ಅರಣ್ಯ ನಾಶವಾಗಿರುವುದಿಲ್ಲ. ಅರಣ್ಯವಾಸಿಗಳು ಪರಿಸರ ಪೂರಕ ಬೇಸಾಯ ಮಾಡುವುದರಿಂದ ಪರಿಸರ ಪೂರಕ ಕಾರ್ಯ ಅರಣ್ಯವಾಸಿಗಳಿಂದ ಜರುಗುತ್ತಿದ್ದು ಅರಣ್ಯ ಇಲಾಖೆಯ ಕಾಮಗಾರಿ ಅರಣ್ಯ ಪ್ರದೇಶದಲ್ಲಿ ಜರುಗುತ್ತಿರುವುದರಿಂದ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಾಂದ್ರತೆ ಕಡಿಮೆಯಾಗುವಲ್ಲಿ ಅರಣ್ಯ ಇಲಾಖೆಯೇ ಕಾರಣವಾಗಿದೆ ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top