ಯಲ್ಲಾಪುರ: ತಾಯಿ ಶಾರದಾಂಬೆ ಸಕಲ ಕಷ್ಟಗಳನ್ನು ನಿವಾರಿಸಿ ನಮ್ಮ ಮಕ್ಕಳಿಗೆ ಒಳ್ಳೆ ವಿದ್ಯಾ ಬುದ್ದಿ ಕರುಣಿಸಿ ಅವರ ಬಾಳಲ್ಲಿ ಬೆಳಕನ್ನುಹರಿಸಲಿ ಮತ್ತು ಈ ಮಹಾಮಾರಿ ಕರೋನಾದಿಂದ ಎಲ್ಲರನ್ನು ರಕ್ಷಿಸಲಿ ಎಂದು ಎಸ್ ಡಿ ಎಂ ಸಿ ಅಧ್ಯಕ್ಷರಾದ ಧೋಂಡು ಬಾಜಾರಿ ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಕೇರಿ ಗೌಳಿ ವಾಡದಲ್ಲಿ ಶಾಲಾ ಪ್ರಾರಂಭೋತ್ಸವ ದಂದು ತಾಯಿ ಶಾರದೆಗೆ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಎಸ್ ಡಿ ಎಂ ಸಿ ಉಪಾಧ್ಯಕ್ಷರು, ಸದಸ್ಯರು ,ಹಾಗೂ ಶಾಲಾ ಸಿಬ್ಬಂದಿಗಳು ಮಕ್ಕಳಿಗೆ ಹೂಗುಚ್ಚ ಮತ್ತು ಸಿಹಿಯನ್ನು ನೀಡುವುದರ ಮೂಲಕ ಶಾಲೆಗೆ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಉಪಾಧ್ಯಕ್ಷರಾದ ನವಿಲು ಝೊರೆ, ಸೋನು ಯಮ್ಕರ, ಮುಖ್ಯ ಶಿಕ್ಷಕಿಯಾದ ರೇವತಿ ನಾಯ್ಕ ಹಾಗೂ ಎಲ್ಲ ಶಿಕ್ಷಕರು ಅಡುಗೆ ಸಿಬ್ಬಂದಿಗಳಾದ ಭಾಗಿ ಬಾಯಿ ಗಂಗೂಬಾಯಿ ಹಾಗೂ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು
ಶಿಕ್ಷಕರಾದ ಗಂಗಾಧರ್ ಎಸ್‍ಎಲ್ ರವರು ಕಾರ್ಯಕ್ರಮ ನಿರೂಪಿಸಿದರೆ ಶೋಭಾ ಗುನಗಿ ಅವರು ಸ್ವಾಗತಿಸಿದರು ಹಾಗೂ ವಾಣಿ ನಾಯ್ಕ ಅವರು ವಂದಿಸಿದರು ಮಕ್ಕಳಿಂದ ಸರ್ವಧರ್ಮೀಯ ಪ್ರಾರ್ಥನೆಯನ್ನು ನೆರವೇರಿಸಲಾಯಿತು