• Slide
  Slide
  Slide
  previous arrow
  next arrow
 • ಹಿರೇಓಣಿ ಸಮುದ್ರ ತೀರದಲ್ಲಿ ರುದ್ರಭೂಮಿ ಜಾಗ ಮಂಜೂರಿಗೆ ಮನವಿ

  300x250 AD

  ಕುಮಟಾ: ತಾಲೂಕಿನ ಹೊಲನಗದ್ದೆ ಗ್ರಾ.ಪಂ ವ್ಯಾಪ್ತಿಯ ಹಿರೇಓಣಿ ಸಮುದ್ರ ತೀರದಲ್ಲಿರುವ 192/1 ಸರ್ವೆ ನಂಬರನ ಅಂಚಿನಲ್ಲಿರುವ ಹೊರೆದು ಬಂದ ಜಾಗದಲ್ಲಿ ಅನಾದಿ ಕಾಲ ದಿಂದಲೂ ಎಲ್ಲಾ ಹಿಂದು ಸಮಾಜದವರು ಶವ ಸಂಸ್ಕಾರ ಮಾಡುತ್ತಾ ಬಂದಿದ್ದು, ಸಾರ್ವಜನಿಕರ ಹಿತ ದೃಷ್ಟಿಯಿಂದ ಇದೇ ಜಾಗದಲ್ಲಿ ರುದ್ರ ಭೂಮಿ ನಿರ್ಮಾಣಕ್ಕೆ ಅನುಮತಿ ನೀಡಿ ಜಾಗ ಮಂಜೂರಿ ಮಾಡಿಕೊಡಬೇಕೆಂದು ಕೋರಿ ಶಾಸಕ ದಿನಕರ ಶೆಟ್ಟಿ ಹಾಗೂ ತಹಶೀಲ್ದಾರ ವಿವೇಕ ಶೇಣ್ವಿ ಅವರಿಗೆ ಮನವಿ ಸಲ್ಲಿಸಲಾಯಿತು.

  ತಾಲೂಕಿನ ಹೊಲನಗದ್ದೆ ಗ್ರಾಪಂ ವ್ಯಾಪ್ತಿಯ ಹಿರೇಓಣಿ, ಗುಡೇಕೊಪ್ಪ, ಬಂಟುಕೇರಿ, ಭಟ್ಕಳಕೇರಿಯ ಸಾರ್ವಜನಿಕರು ಹಿರೇಓಣಿ ಸಮುದ್ರ ತೀರದಲ್ಲಿರುವ 192/1 ಸರ್ವೆ ನಂಬರನ ಅಂಚಿನಲ್ಲಿರುವ ಹೊರೆದು ಬಂದ ಜಾಗದಲ್ಲಿ ಅನಾದಿ ಕಾಲ ದಿಂದಲೂ ಎಲ್ಲಾ ಹಿಂದು ಸಮಾಜದವರು ಶವ ಸಂಸ್ಕಾರ ಮಾಡುತ್ತಾ ಬಂದಿರುತ್ತಾರೆ. ಈ ಸ್ಮಶಾನ ಜಾಗದಲ್ಲಿ 2009-2010 ರಲ್ಲಿ ಮಾನ್ಯ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ 1 ಲಕ್ಷ ರೂಪಾಯಿ ಅನುದಾನದಡಿ ಸ್ಮಶಾನಕ್ಕೆ ಕಂಪೌಂಡ ನಿರ್ಮಾಣ ಹಾಗೂ ತಾಲೂಕಾ ಪಂಚಾಯತ ದಿಂದ 50 ಸಾವಿರ ರೂ ಕಂಪೌಂಡ ನಿರ್ಮಾಣ ಹಾಗೂ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ 2011-2012 ರಲ್ಲಿ 1 ಲಕ್ಷ ರೂಪಾಯಿ ಸ್ಮಶಾನ ಅಭಿವೃದ್ದಿಗಾಗಿ ಮಂಜೂರಿಯಾಗಿರುತ್ತದೆ.


  ಈ ಭಾಗದಲ್ಲಿ ಬೇರೆ ಯಾವುದೇ ಸ್ಮಶಾನ ಭೂಮಿ ಇಲ್ಲದಿರುವದರಿಂದ ಇದೇ ಜಾಗದಲ್ಲಿ ಸ್ಥಳೀಯ ಸಾರ್ವಜನಿಕರ ಹಿತ ದೃಷ್ಟಿಯಿಂದ ಶಾಸ್ವತ ರುದ್ರ ಭೂಮಿ ನಿರ್ಮಾಣ ಕುರಿತಂತೆ ಹೊಲನಗದ್ದೆ ಗ್ರಾಮ ಪಂಚಾಯತದಲ್ಲಿ 23-02-2011 ರಲ್ಲಿ ನಡೆದ ಗ್ರಾಮ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ದಿನಾಂಕ 26-02-2011 ರಲ್ಲಿ ನಡೆದ ಸಾಮಾನ್ಯ ಸಭೆಯಲ್ಲೂ ಈ ಕುರಿತು ಠರಾವು ಪಾಸು ಮಾಡಲಾಗಿತ್ತು.
  ಈ ಜಾಗವು ಸಮುದ್ರ ತೀರದ ಅಂಚಿನಲ್ಲಿ ಹೊರೆದು ಬಂದ ಜಾಗವಾಗಿರುತ್ತದೆ. ಇದು ಸಿ.ಆರ್.ಝೇಡ್‍ಗೆ ಸಂಬಂಧಿಸಿದ್ದು. ಅವರ ಪ್ರಕಾರ ಈ ಜಾಗದಲ್ಲಿ ಚಿತಾಗಾರ ಹಾಗೂ ರುದ್ರಭೂಮಿ ನಿರ್ಮಾಣಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಕೆಲವು ತಿಂಗಳ ಹಿಂದೆ ಖಾಸಗಿ ಕಂಪನಿಯವರು ಈ ಜಾಗವನ್ನು ಅತಿಕ್ರಮಿಸಿ ತೂಗುಯ್ಯಾಲೆ, ಇನ್ನಿತರ ಪರಿಕರಗಳು ಪಂಚಾಯತದ ಪರವಾನಿಗೆ ಪಡೆಯದೆ ಅಳವಡಿಸಲಾಗಿತ್ತು. ಈ ಕುರಿತು ಸ್ಥಳೀಯರು ಹಿಂದಿನ ಸಹಾಯಕ ಆಯುಕ್ತರಾದ ಎಮ್ ಅಜಿತ್ ಅವರಿಗೆ ಸ್ಮಶಾನದಲ್ಲಿ ಅನಧಿಕೃತವಾಗಿ ಅಳವಡಿಸಲಾದ ಜೋಕಾಲಿ ಹಾಗೂ ಇನ್ನಿತರ ಪರಿಕರಗಳನ್ನು ತೆರವುಗೊಳಿಸುವಂತೆ ಮನವಿ ಸಲ್ಲಿಸಲಾಗಿತ್ತು.

  300x250 AD

  ಸಾರ್ವಜನಿಕರ ಮನವಿಗೆ ಸಹಾಯಕ ಆಯುಕ್ತರು ತಕ್ಷಣ ಸ್ಫಂಧಿಸಿ ಸ್ಥಳ ಪರಿಶೀಲನೆ ನಡೆಸಿ ಜೋಕಾಲಿ ಹಾಗೂ ಇನ್ನಿತರ ಪರಿಕರಗಳನ್ನು ತಕ್ಷಣ ತೆರವುಗೊಳಿಸುವಂತೆ ಖಾಸಗಿ ಕಂಪನಿ ಮಾಲಿಕರಿಗೆ ಸೂಚನೆ ನೀಡಿದ್ದರು. ಅದರಂತೆ ಖಾಸಗಿ ಕಂಪನಿ ಮಾಲಿಕರು ತಕ್ಷಣ ಖುಲ್ಲಾಪಡಿಸಿ ಸಾರ್ವಜನಿಕರಿಗೆ ಅನೂಕೂಲ ಕಲ್ಪಿಸಿದ್ದರು. ಅಲ್ಲದೇ ಹಿರೇಓಣಿ, ಗುಡೇಕೊಪ್ಪ, ಬಂಟುಕೇರಿ ಹಾಗೂ ಭಟ್ಕಳಕೇರಿ ಸೇರಿ ಒಟ್ಟೂ 3 ಸಾವಿರ ಜನಸಂಖ್ಯೆ ಇದ್ದು. ಈ ಭಾಗದಲ್ಲಿ ಯಾರೊಬ್ಬರೂ ನಿಧನರಾದರೂ ಶವ ಸಂಸ್ಕಾರ ನಡೆಸಲು ಬೇರೆ ಯಾವುದೇ ಜಾಗ ಇರುವುದಿಲ್ಲ. ಹೀಗಾಗಿ ಮಾನ್ಯರು ಸಾರ್ವಜನಿಕರ ಹಿತ ದೃಷ್ಟಿಯಿಂದ ಇದೇ ಜಾಗದಲ್ಲಿ ರುದ್ರ ಭೂಮಿ ನಿರ್ಮಾಣಕ್ಕೆ ಅನುಮುತಿ ನೀಡಿ ಜಾಗ ಮಂಜೂರಿ ಮಾಡಿಕೊಡಬೇಕಾಗಿ ವಿನಂತಿಸಿ ಮನವಿ ಸಲ್ಲಿಸಲಾಯಿತು.

  ಈ ಸಂಧರ್ಭದಲ್ಲಿ ಹೊಲನಗದ್ದೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಈಶ್ವರ್ ಪಟಗಾರ ಗುಡೇಕೊಪ್ಪ ರವಿ ಪಟಗಾರ, ರಾಜು ನಾಯ್ಕ, ವಿನಾಯಕ ನಾಯ್ಕ ಉದಯ್ ಪಟಗಾರ ನಾಗೇಶ್ ಪಟಗಾರ, ಮಹಾದೇವ ಪಟಗಾರ ವಿನಾಯಕ ಭಟ್ ವೆಂಕಟ್ರಮಣ ಪಟಗಾರ ಮಹಾಂತೇಶ್ ಹರಿಕಾಂತ್ರ ಸುರೇಶ ಹರಿಕಾಂತ್ರ ಪರಮೇಶ್ವರ್ ಪಟಗಾರ ತಿಪ್ಪಯ್ಯ್ ಪಟಗಾರ ನಾಗರಾಜ್ ಮುಕ್ರಿ ಸೇರಿದಂತೆ ಇತರರು ಇದ್ದರು

  Share This
  300x250 AD
  300x250 AD
  300x250 AD
  Leaderboard Ad
  Back to top