ಕುಮಟಾ: ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ತಾಲ್ಲೂಕಿನ ಗುಡೇಅಂಗಡಿ ಶಾಲೆಯ ಶಿಕ್ಷಕ ವಸಂತ ಶಾನಭಾಗ ಅವರು ಹೆಗಡೆ ಗ್ರಾಮದ ಗೌರವವನ್ನು ಹೆಚ್ಚಿಸಿದ್ದಾರೆ.
ವಸಂತ ಶಾನಭಾಗ ಅವರು 1994 ರಿಂದ 2005 ರ ತನಕ ಡಿ ಎಫ್ ಎ ಸ ಹಿ ಪ್ರಾ ಶಾಲೆಯಲ್ಲಿ, 2005 ರಿಂದ 2007 ರವರೆಗೆ ಸ ಹಿ ಪ್ರಾ ಶಾಲೆ ಭಟ್ಕಳ ದ ಬೈಲೂರಿನ ವಡಿಕೇರಿ ಶಾಲೆಯಲ್ಲಿ, 2007 ರಿಂದ ನಿರಂತರವಾಗಿ ಗುಡೇಅಂಗಡಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತ ಬಂದಿರುತ್ತಾರೆ. ಸದಾ ಚಟುವಟಿಕೆ ಇಂದ ಮಕ್ಕಳ ಜೊತೆ ಮಕ್ಕಳಂತೆಯೇ ಇದ್ದು ಉತ್ತಮ ನಯ ವಿನಯತೆಯಿಂದ ದೈಹಿಕ ಶಿಕ್ಷಣ ನೀಡುವ ಇರುವ ಊರ ನಾಗರಿಕರ ಜೊತೆಗೂ ಕೂಡ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇವರ ಉತ್ತಮ ಸೇವೆ ಗೆ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿದೆ. ಸದಾ ಚಟುವಟಿಕೆ ಇಂದ ಮಕ್ಕಳ ಜೊತೆ ಮಕ್ಕಳಂತೆಯೇ ಉತ್ತಮ ದೈಹಿಕ ಶಿಕ್ಷಣ ನೀಡುವ ಇರುವ ಊರ ನಾಗರಿಕರ ಜೊತೆಗೂ ಕೂಡ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಈಗ ಸಾರ್ವಜನಿಕ ಶಿಕ್ಷಣ ಇಲಾಖೆ ಉತ್ತರ ಕನ್ನಡ ಇವರಿಗೆ ಉತ್ತಮ ಜಿಲ್ಲಾ ಮಟ್ಟದ ಶಿಕ್ಷಕ ಎಂದು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದೆ. ಇವರು ಶಿಕ್ಷಕರಾಗಿಯೂ, ಉತ್ತಮ ಕ್ರೀಡಾಪಟುವಾಗಿಯೂ ಗುರುತಿಸಿಕೊಂಡಿದ್ದಾರೆ.