ಶಿರಸಿ: ನಗರದಲ್ಲಿ ಸಹಕಾರ ಸಚಿವ ಎಸ್.ಟಿ ಸೋಮಶೇಖರ ಅವರನ್ನು ಭೇಟಿ ಮಾಡಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ನೌಕರರ ನೇಮಕಾತಿ, ವೃಂದಬಲ ಮತ್ತು ವೇತನ ಶ್ರೇಣಿಯಂತ ನಿರ್ಧರಿಸುವಿಕೆಯ ಅಧಿಕಾರವನ್ನು ಆಯಾ ಸಂಸ್ಥೆಗಳ ಆಡಳಿತ ಸಮಿತಿಗಳಿಗೇ ನೀಡಬೇಕೆಂದು ಉತ್ತರ ಕನ್ನಡ ಜಿಲ್ಲಾ ಪ್ರಾಥಮಿಕ ಪತ್ತಿನ ನೌಕರರ ಸಂಘದ ಅಧ್ಯಕ್ಷ ಎಸ್.ಎನ್.ಹೆಗಡೆ ದೊಡ್ನಳ್ಳಿ ಹಾಗೂ ಪದಾಧಿಕಾರಿಗಳು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮತ್ತಿಘಟ್ಟ ವಿ.ಆರ್.ಹೆಗಡೆ, ರಾಮನಗುಳಿ ಎಸ್. ಎನ್. ಹೆಗಡೆ, ಜಿ.ವಿ.ಭಟ್ಟ ತಟ್ಟೀಸರ, ಮುರಳಿ ಹೆಗಡೆ ಕಾನಗೋಡ ಇತರರು ಉಪಸ್ಥಿತರಿದ್ದರು.