ಶಿರಸಿ: ಇಲ್ಲಿನ ಜಿ.ಪಂ ಇಂಜಿನೀಯರಿಂಗ್ ಕಛೇರಿ ಮೇಲೆ ಎ.ಸಿ.ಬಿ ಅಧಿಕಾರಿಗಳು ದಾಳಿ ನಡೆಸಿ, ಲಂಚ ಪಡೆಯುತ್ತಿದ್ದ ಇಬ್ಬರು ಸಿಬ್ಬಂದಿಗಳು ಬಂಧಿಸಿದ ಘಟನೆ ಸೋಮವಾರ ನಡೆದಿದೆ.
ಸಿಬ್ಬಂದಿಗಳಾದ ಸುಬ್ರಹ್ಮಣ್ಯ ಮತ್ತು ಯದುನಂದನ ಬಂಧನಕ್ಕೊಳಗಾದವರು. ಇವರು ಶಿವಮೊಗ್ಗದ ಗುತ್ತಿಗೆದಾರ ಸುನೀಲನ ಬಳಿ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳ ತಂಡ ದಾಳಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದಿದೆ. ಕಾರ್ಯಾಚರಣೆಯಲ್ಲಿ ಎಸಿಬಿ ಡಿ.ಎಸ್.ಪಿ ವೀರೇಶ್, ಮುಜಾವರ, ಬಾಲನಗೌಡ, ರಾಜೇಂದ್ರ ಪ್ರಭು, ಗಜೇಂದ್ರ, ಕೃಷ್ಣ, ಶಿವಕುಮಾರ್ ತಂಡದ ದಾಳಿ ನಡೆಸಿತ್ತು.