• first
  second
  third
  previous arrow
  next arrow
 • ಶತಮಾನೋತ್ಸವ ಸಮಾರಂಭ; ರಾಜ್ಯಕ್ಕೆ ಮಾದರಿಯಾಗಿ ಕೆಡಿಸಿಸಿ ಬ್ಯಾಂಕ್; ಸಹಕಾರ ಸಚಿವ ಸೋಮಶೇಖರ್

  300x250 AD

  ಶಿರಸಿ: ರಾಜ್ಯದ 21 ಡಿಸಿಸಿ ಬ್ಯಾಂಕ್ ಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ರಾಷ್ಟ್ರಮಟ್ಟದಲ್ಲಿ ಉತ್ತರ ಕನ್ನಡ ಡಿಸಿಸಿ ಬ್ಯಾಂಕ್ ಗುರುತಿಸಿಕೊಂಡಿದೆ ಎಂದು ರಾಜ್ಯ ಸಹಕಾರಿ ಸಚಿವ ಎಸ್ ಟಿ ಸೋಮಶೇಖರ ಹೇಳಿದರು.

  ಅವರು ಸೋಮವಾರ ನಗರದ ಕೆಡಿಸಿಸಿ ಪ್ರಧಾನ ಕಛೇರಿಯಲ್ಲಿ ಮಡೆದ ಬ್ಯಾಂಕಿನ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಹಕಾರಿ ರಂಗದಲ್ಲಿ ಜಿಲ್ಲೆಯ ಸಾಧನೆ ಅಪರಿಮಿತವಾದುದು. ಜಿಲ್ಲೆಯ ವಿಷಯದಲ್ಲಿ ಸಹಕಾರಿ ಕ್ಷೇತ್ರಕ್ಕೆ ಏನೇ ಸಮಸ್ಯೆ ಬಂದರೂ, ತಕ್ಷಣವೇ ಸಭಾಧ್ಯಕ್ಷ ಕಾಗೇರಿ ನಮ್ಮನ್ನೆಚ್ಚರಿಸಿತ್ತಾರೆ ಎಂದರು.

  ರಾಜ್ಯದ 21 ಕೆಡಿಸಿಸಿ ಬ್ಯಾಂಕ್ ಪೈಕಿ, ಉತ್ತರ ಕನ್ನಡ ಮೊದಲನೇ ಸ್ಥಾನದಲ್ಲಿರುವುದು ಇಲ್ಲಿಯ ಸಹಕಾರಿ‌ ಧುರೀಣರ ಕಾರಣದಿಂದಾಗಿದೆ. ಜನರಿಗೆ ಸಹಕಾರಿ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಇಂತಹ ಬ್ಯಾಂಕ್ ಗಳು ಹೆಚ್ಚಿಸುತ್ತವೆ ಎಂದರು.

  ಶತಮಾನೋತ್ಸವ ಸ್ಮರಣ ಸಂಚಿಕೆ ಸಾಂಕೇತಿಕವಾಗಿ ಉದ್ಘಾಟಿಸಿ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಸಹಕಾರಿ ರಂಗದಲ್ಲಿ ಉತ್ತರ ಕನ್ನಡ ಜಿಲ್ಲೆಯದ್ದು ಕಳಂಕ ರಹಿತವಾಗಿದೆ. ಸರಕಾರಿ ಸೌಲಭ್ಯಗಳು ಇಲ್ಲಿನ ಜನರಿಗೆ ನೇರವಾಗಿ ತಲುಪುವಲ್ಲಿ ಸಹಕಾರಿ ಬ್ಯಾಂಕ್ ಗಳ ಕೊಡುಗೆ ಅಪಾರವಾಗಿದೆ ಎಂದರು.

  ಮಾಜಿ ಸಚಿವ ಆರ್ ವಿ ದೇಶಪಾಂಡೆ ಮಾತನಾಡಿ, ಸಹಕಾರ ಕ್ಷೇತ್ರದಿಂದ ರಾಷ್ಟ್ರದ ಪ್ರಗತಿ ಸಾಧ್ಯ. ಈ ಕ್ಷೇತ್ರದಲ್ಲಿ ಇರುವವರು ಸೇವಾಮನೋಭಾವನೆಯಿಂದ, ನಿಷ್ಪಕ್ಷಪಾತಿಯಾಗಿ, ಪಕ್ಷತೀತವಾಗಿ ಕಾರ್ಯ ನಿರ್ವಹಿಸಬೇಕು. ಉದ್ಯೋಗ ಸೃಷ್ಟಿಸುವ ಕೆಲಸ ಬ್ಯಾಂಕಿನಿಂದಾಗಬೇಕು. ಸಂಸ್ಥೆ ಈ ವರಗೆ ನಡೆದು ಬಂದ ಹಾದಿ ತಪ್ಪಬಾರದು. ಇದು ಒಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಪ್ರತಿಯೊಬ್ಬ ಬಡವನ ಹೃದಯದಲ್ಲಿ ಬ್ಯಾಂಕ್ ನೆಲೆಸುವಂತಾಗಬೇಕು ಎಂದು ಹೇಳಿದರು.

  ಸಂಸ್ಥೆಯ ಮೈಕ್ರೋ ಎಟಿಎಮ್ ಸೌಲಭ್ಯ ಉದ್ಘಾಟಿಸಿ ಮಾತನಾಡಿದ ಸಚಿವ ಬಿ ಸಿ ಪಾಟೀಲ್, ಕೃಷಿಗೆ ಸಹಕಾರಿ ಕ್ಷೇತ್ರ ಪೂರಕ. ಇಂದಿನ ದಿನದಲ್ಲಿ ಕೃಷಿ ಉತ್ಪನ್ನ ಹೆಚ್ಚುತ್ತಲಿದೆ. ಆದರೆ ಕೃಷಿಕ ಚಿಕ್ಕವನಾಗಿದ್ದನೆ. ಅಂದರೆ ಕೃಷಿಕ ಬೆಳೆಯುತ್ತಿಲ್ಲ, ಕೃಷಿ ಬೆಳೆದಿದೆ. ಕೃಷಿ ಉತ್ಪಾದನೆ ಜೊತೆ ಕೃಷಿ ಬೆಳೆಯಲು ಅವರು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಸಿಗಬೇಕು. ಅಂದಾಗ ಮಾತ್ರ ರೈತನ ಆದಾಯ ದ್ವಿಗುಣಗೊಳ್ಳಲು ಸಾಧ್ಯ. ಅದಕ್ಕೆ ಪೂರಕ ಎಲ್ಲ ಮಾರುಕಟ್ಟೆಗಳು ಶಿರಸಿಯಲ್ಲಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಲಭ್ಯವಿದೆ.

  300x250 AD

  ಗೇರು, ತೆಂಗು, ಅಡಿಕೆ, ಸಾಂಬಾರು ಮರುಕಟ್ಟೆ ಈ ಥರದ ಮಾರುಕಟ್ಟೆ ವ್ಯವಸ್ಥೆ ಸಿಕ್ಕು ಮದ್ಯ ದಲ್ಲಾಳಿಗಳ ಪಾತ್ರ ನಿಲ್ಲಬೇಕು. ಜೊತೆಗೆ ರೈತರ ಆದಾಯ ದ್ವಿಗುಣಗೊಳ್ಳಲು ಸಂಸ್ಕರಣಾ ಘಟಕ ಬೇಕು. ಅದಕ್ಕಾಗಿ ನಮ್ಮ ಪ್ರಧಾನಿ ಮೋದಿ ಕೃಷಿ ವಲಯಕಕೆ 1 ಲಕ್ಷ ಕೋಟಿ ಅದರಲ್ಲಿ 10 ಸಾವಿರ ಕೋಟಿ ರೂ ಗಳನ್ನ ಆತ್ಮನಿರ್ಭರ ಯೋಜನೆಯಡಿ ಆಹಾರ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಇಟ್ಟಿದ್ದಾರೆ. ಅದರ ಪ್ರಯೋಜನದ ಕುರುಹು ಇಲ್ಲಿ ಕಾಣುತ್ತದೆ.


  ಕೆಡಿಸಿಸಿ ಬ್ಯಾಂಕ್ ಇತರೆ ಯಾವುದೇ ಬ್ಯಾಂಕಿನಿಂದಲೂ ಸಾಲ ತೆಗೆದುಕೊಂಡಿಲ್ಲ. ಇಲ್ಲಿಂದಲೇ 700 ಕೋಟಿ ರೂ.ಗಳನ್ನು ಅಪೆಕ್ಸ್ ಬ್ಯಾಂಕಿನಲ್ಲಿ ಇಟ್ಟಿದೆ ಎಂದು ಅಧ್ಯಕ್ಷ ಹೆಬ್ಬಾರ್ ತಿಳಿಸಿದ್ದಾರೆ. ಅಲಲ್ದೇ ಇದೇ ಸೆ.18ಕ್ಕೆ ಯಲ್ಲಾಪುರಕ್ಕೆ ಬರಲಿದ್ದು, ರೈತರ ಜೊತೆ ಒಂದು ದಿನ ಕಾರ್ಯಕ್ರಮ ಮಾಡಲಿದ್ದೇನೆ. ಸರ್ಕಾರವನ್ನು ಹುಡುಕಿ ರೈತರು ಬರಬೇಕಿಲ್ಲ, ಅರನ್ನು ಭೇಟಿಯಾಗಲು ರೈತರಿದ್ದಲ್ಲಿ ಸರ್ಕಾರವೇ ಬರಲಿದೆ ಎಂದು ಹೇಳಿದರು.

  ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಬ್ಯಾಂಕಿನ ನೂತನ ಭಾರತ್ ಬಿಲ್ ಪೇಮೆಂಟ್ ವ್ಯವಸ್ಥೆಯನ್ನು ಉದ್ಘಾಟನೆಗೊಳಿಸಿ, ಮಾತನಾಡಿದರು. ಅಫೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ ಕೃಷಿ ಸಾಲವನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿದರು. ಆಡಳಿತ ಕಟ್ಟಡದ ಆಧುನಿಕ ವಿಸ್ತರಣಾ ವಿಭಾಗ ಉದ್ಘಾಟನೆಯನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೆರವೇರಿಸಿದರು.

  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ, ರಾಜ್ಯ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ ನಾಯಕ ಸ್ಬಾಗತಿಸಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್ ಜಿ ಭಾಗ್ವತ್ ವಂದನಾರ್ಪಣೆ ನಡೆಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷರಾಗಿದ್ದ ಜಿ ಟಿ ಹೆಗಡೆ ತಟ್ಟೀಸರ, ಎಸ್ ಎಲ್ ಘೋಟ್ನೇಕರ್ ಅವರನ್ನು ಸನ್ಮಾನಿಸಲಾಯಿತು.

  ವೇದಿಕೆಯಲ್ಲಿ ಶಾಸಕರುಗಳಾದ ದಿನಕರ ಶೆಟ್ಟಿ, ಸುನೀಲ್ ನಾಯ್ಕ, NWKSRTC ಅಧ್ಯಕ್ಷ ವಿ ಎಸ್ ಪಾಟೀಲ್, ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರು, ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ, ಸಂಯುಕ್ತ ನಿಬಂಧಕ ಜಿ. ಎಮ್.ಪಾಟೀಲ್ ಹಾಗು ಸಂಸ್ಥೆಯ ನಿರ್ದೇಶಕರಾದ ಸುರೇಶ್ಚಂದ್ರ ಕೆಶಿನ್ಮನೆ, ರಾಮಕೃಷ್ಣ ಹೆಗಡೆ ಕಡವೆ, ಪ್ರಕಾಶ ಗುನಗಿ, ಬೀರಣ್ಣ ನಾಯಕ, ಆರ್ ಎಮ್ ಹೆಗಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Back to top