• first
  second
  third
  previous arrow
  next arrow
 • ಕಿರುತೆರೆ ಕ್ಷೇತ್ರದಲ್ಲಿ ಮಿಂಚುತ್ತಿರುವ ಯಲ್ಲಾಪುರದ ಪ್ರತಿಭೆ ಮಹೇಶ್ ಭಟ್

  300x250 AD

  ಯಲ್ಲಾಪುರ: ತಾಲೂಕಿನ ಮಾಗೋಡಿನ ಯುವ ಪ್ರತಿಭಾವಂತ ನಟ ಮಹೇಶ ಭಟ್ ವಿವಿಧ ಧಾರಾವಾಹಿಗಳಲ್ಲಿ ಉತ್ತಮ ನಟನೆಯ ಮೂಲಕ ಧಾರಾವಾಹಿ ಕ್ಷೇತ್ರದಲ್ಲಿ ಸಾಧನೆಯ ಹಾದಿಯಲ್ಲಿದ್ದಾರೆ.


  ಪ್ರಸ್ತುತ ಸಿರಿ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಕ್ಕೆ ಪ್ರಸಾರವಾಗುತ್ತಿರುವ ಕಲ್ಪನಾ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿರುವ ಮಹೇಶ ಅದ್ಭುತ ನಟನೆಯ ಮೂಲಕ ಗಮನ ಸೆಳೆಯುತ್ತಿದ್ದಾರೆ. ಧಾರಾವಾಹಿ, ಚಿತ್ರರಂಗದ ಯಾವುದೇ ಹಿನ್ನೆಲೆ ಹೊಂದಿರದೇ ಇದ್ದರೂ ಕೇವಲ ಪ್ರತಿಭೆಯ ಮೂಲಕ ಗುರುತಿಸಿಕೊಂಡಿರುವುದು ಮಹೇಶ ಅವರ ವಿಶೇಷತೆ.


  ಯಲ್ಲಾಪುರ ತಾಲೂಕಿನ ಮಾಗೋಡಿನ ನಾರಾಯಣ ಭಟ್ ಹಾಗೂ ಸರಸ್ವತಿ ಭಟ್ ದಂಪತಿಯ ಪುತ್ರ ಮಹೇಶ ಎಸ್.ಎಸ್.ಎಲ್.ಸಿ ನಂತರ ಉಮ್ಮಚಗಿಯ ಪಾಠಶಾಲೆಯಲ್ಲಿ 6 ವರ್ಷಗಳ ಕಾಲ ಸಂಸ್ಕೃತ ಅಧ್ಯಯನ ನಡೆಸಿದ್ದಾರೆ. ಅದೇ ವೇಳೆ ನಟನೆಯ ಕುರಿತು ತೀವ್ರ ಆಸಕ್ತಿ ಹೊಂದಿದ್ದರು.

  300x250 AD


  ಮಂಗಲರಾಗ್ ಹೆಗಡೆ ಅವರ ಸಹಕಾರದೊಂದಿಗೆ ಶಾಂತಂ ಪಾಪಂ ಧಾರಾವಾಹಿಯಲ್ಲಿ ಚಿಕ್ಕ ಪಾತ್ರವನ್ನು ಮೊದಲ ಬಾರಿಗೆ ಮಹೇಶ ನಿರ್ವಹಿಸಿದರು. ನಂತರ ಬೆಂಗಳೂರಿನ ಆದರ್ಶ ಫಿಲ್ಮ್&ಟಿವಿ ಇನ್ಸ್ಟಿಟ್ಯೂಟ್ ನಲ್ಲಿ ಅಭಿನಯ ತರಬೇತಿಯನ್ನೂ ಪಡೆದರು.
  ಹಲವೆಡೆ ಆಡಿಷನ್ ಕೊಟ್ಟ ನಂತರ ಸಣ್ಣಪುಟ್ಟ ಅವಕಾಶಗಳು ದೊರಕಲಾರಂಭಿಸಿದವು. ಸೀತಾವಲ್ಲಭ, ಕಮಲಿ, ಅಪರಂಜಿ, ಬ್ರಹ್ಮಗಂಟಿ, ಸಿಲ್ಲಿ ಲಲ್ಲಿ ಮುಂತಾದ ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದಾರೆ.


  ನಂತರ ರುಕ್ಕು ಧಾರಾವಾಹಿಯಲ್ಲಿ ನಾಯಕನ ಗೆಳೆಯನ ಪಾತ್ರ ನಿರ್ವಹಿಸಿರುವುದು ಅವರ ಪ್ರತಿಭೆಗೆ ತಕ್ಕ ಮನ್ನಣೆ ನೀಡಿತು. ಅದರ ಯಶಸ್ಸಿನ ಬೆನ್ನಲ್ಲೇ ಸುಶೀಲ ಮೊಕಾಶಿ ನಿರ್ದೇಶನದ ಕಲ್ಪನಾ ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸುವ ಅವಕಾಶ ದೊರೆತಿದ್ದು, ಉತ್ತಮ ಅಭಿನಯದ ಮೂಲಕ ಹೆಸರು ಗಳಿಸುತ್ತಿದ್ದಾರೆ.

  ಇದರ ಜತೆ ಟೆಲಿವಿಷನ್ ಕ್ರಿಕೇಟ್ ಲೀಗ್ ನಲ್ಲೂ ಮಹೇಶ ಭಾಗವಹಿಸಿದ್ದಾರೆ.
  ಧಾರಾವಾಹಿ, ಚಲನಚಿತ್ರ ಕ್ಷೇತ್ರದಲ್ಲಿ ಅಪಾರ ಸಾಧನೆಗೈಯ್ಯುವ ಉತ್ಸಾಹ, ಉದ್ದೇಶ ಹೊಂದಿರುವ ಮಹೇಶ ತನ್ಬ ಬೆಳವಣಿಗೆಗೆ ಪೆÇ್ರೀತ್ಸಾಹಿಸಿದ ರಾಜೇಶ ಧ್ರುವ ಹಾಗೂ ಸಹಕರಿಸುತ್ತಿರುವ ಎಲ್ಲರನ್ನು ಕೃತಜ್ಞತಾ ಭಾವದಿಂದ ನೆನೆಯುತ್ತಾರೆ.

  Share This
  300x250 AD
  300x250 AD
  300x250 AD
  Back to top