ಮುಂಡಗೋಡ: ಮಹಿಳೆ ಮತ್ತು ಮಹಿಳಾ ಮಕ್ಕಳ ಭದ್ರತೆ, ಆನ್‍ಲೈನ ವಂಚನೆ, ಹಾಗೂ 112 ತುರ್ತು ಸಹಾಯವಾಣಿ ಕುರಿತು ತಾಲೂಕಿನ ಟಿಬೆಟಿಯನ್ ಸೊಸೈಟಿಯ ಸಭಾಭವನದಲ್ಲಿ ಪಿ.ಎಸ್.ಐ ನೇತೃತ್ವದಲ್ಲಿ ಸಭೆ ನಡೆಯಿತು.
ಪಿ.ಎಸ್‍ಐ ಬಸವರಾಜ ಮಬನೂರ ಮಾತನಾಡಿ, ಕೊವಿಡ್ ಸಂಕಷ್ಟದ ವೇಳೆ ಟಿಬೆಟಿಯನ್ ಕಾಲೂನಿಯಲ್ಲಿ ಮೊದಲನೇ ಹಂತದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಸಮಯದಲ್ಲಿ ಇಲ್ಲಿನ ಆಡಳಿತದವರು ಒಳ್ಳೆಯ ರೀತಿಯ ಕೆಲಸ ಮಾಡಿದರ ಜೊತೆಗೆ ಕಾಲಕಾಲಕ್ಕೆ ಕಠಿಣ ನಿರ್ಧಾರ ತೆಗೆದುಕೊಂಡಿದ್ದರಿಂದ ಕ್ಯಾಂಪಿನ ವ್ಯಾಪ್ತಿಯಲ್ಲಿ ಸೋಂಕು ನಿಯಂತ್ರಣ ಮಾಡಲು ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಿ ಪಡಿಸಿದ ಅವರು, ಮಹಿಳೆ ಮತ್ತು ಮಹಿಳಾ ಮಕ್ಕಳ ಸುರಕ್ಷತೆ, 112 ತುರ್ತು ಸಹಾಯವಾಣಿಯ ಬಗ್ಗೆ ಸವಿಸ್ತಾರವಾಗಿ ಮತ್ತು ಕಾನೂನು ಅರಿವು ಮೂಡಿಸಿದರು. ಟಿಬೆಟಿಯನ್ ಕ್ಯಾಂಪಿನ ಸೊಸೈಟಿ ಚೇರಮನ್ ಲಾಕ್ಪಾ ಸಿರಿಂಗ್ ಮಾತನಾಡಿದರು.
ಸಭೆಯಲ್ಲಿ ಟಿಬೆಟಿಯನ್ ಕ್ಯಾಂಪಿನ ಮುಖ್ಯಸ್ಥರು, ಹಿರಿಯ ಬೌದ್ಧ ಬಿಕ್ಕುಗಳು ಹಾಗೂ ಪೊಲೀಸ್ ಸಿಬ್ಬಂದಿ ರಾಘವೇಂದ್ರ ಮೂಳೆ ಮುಂತಾದವರು ಉಪಸ್ಥಿರಿದ್ದರು.