• Slide
    Slide
    Slide
    previous arrow
    next arrow
  • ಅರಣ್ಯವಾಸಿ 30 ವರ್ಷ ಹೋರಾಟ: ಸೆ.12 ಕ್ಕೆ ಅವಲೋಕನ ಸಭೆ

    300x250 AD

    ಶಿರಸಿ: ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಜಿಲ್ಲೆ ಮತ್ತು ರಾಜ್ಯದಲ್ಲಿ ಅರಣ್ಯವಾಸಿಪರ ಹೋರಾಟಕ್ಕೆ ಸೆ.12 ಕ್ಕೆ 30 ವರ್ಷ ಮುಕ್ತಾಯಗೊಳ್ಳುವ ಸಂದರ್ಭದಲ್ಲಿ ‘30 ವರ್ಷ ಅರಣ್ಯ ಭೂಮಿ ಹೊರಾಟ’-ಒಂದು ಅವಲೋಕನ ಎಂಬ ಕಾರ್ಯಕ್ರಮವನ್ನ ಶಿರಸಿಯಲ್ಲಿ ಸಂಘಟಿಸಲಾಗಿದೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.

    ಅಂದು ಮುಂಜಾನೆ 10:30 ಕ್ಕೆ ಶಿರಸಿಯ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆಯ ಕಾರ್ಯಾಲಯದಲ್ಲಿ ಸಂಘಟಿಸಲಾಗಿದೆ ಎಂದು ಅವರು ತಿಳಿಸಿದರು.

    300x250 AD

    ಉತ್ತರ ಕನ್ನಡ ಜಿಲ್ಲೆ ಮತ್ತು ಕರ್ನಾಟಕದ ವಿವಿಧ 16 ಜಿಲ್ಲೆಗಳಲ್ಲಿ ಅರಣ್ಯವಾಸಿಗಳ ಪರ ನಿರಂತರ 30 ವರ್ಷ ಸಂಘಟನೆ, ಹೋರಾಟ, ಆಂದೋಲನ ಹಾಗೂ ಸುಫ್ರಿಂ ಕೋರ್ಟ ಮತ್ತು ಹೈ ಕೋರ್ಟಗಳಲ್ಲಿ ಅರಣ್ಯವಾಸಿಗಳ ಪರವಾಗಿ 30 ವರ್ಷ ಸಂಘಟಿಸಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ

    Share This
    300x250 AD
    300x250 AD
    300x250 AD
    Leaderboard Ad
    Back to top