• Slide
    Slide
    Slide
    previous arrow
    next arrow
  • ಪೆಟ್ರೋಲ್-ಡಿಸೇಲ್ ದರ ಗಗನಕ್ಕೆ; ಮಹಿಳಾ ಕಾಂಗ್ರೆಸ್’ನಿಂದ ಪ್ರತಿಭಟನೆ

    300x250 AD

    ಯಲ್ಲಾಪುರ: ಇವತ್ತು ಬೆಲೆ ಎರಿಕೆಯಾದರೂ ಕೇಳುವವರಿಲ್ಲಾ ಸರಕಾರಕ್ಕೆ ಕಣ್ಣು ಕವಿ ಎರಡೂ ಇಲ್ಲ. ಎಲ್ಲಾ ಬಡವರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಟಿ ಸಿ ಗಾಂವ್ಕರ ವಜ್ರಳ್ಳಿ ಹೇಳಿದರು.


    ಅವರು ಮಹಿಳಾ ಕಾಂಗ್ರೇಸ್ ಹಮ್ಮಿಕೊಂಡ ಗ್ಯಾಸ್ ದರ ಎರಿಕೆಯನ್ನು ವಿರೋಧಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡುತ್ತ ಮನಮೋಹನ ಸಿಂಗ ಪ್ರದಾನಿಯಾಗಿದ್ದಾಗ ಪೆಟ್ರೋಲ್, ಗ್ಯಾಸ್ ದರ ಕಡಿಮೆ ಇತ್ತು ಇವತ್ತು ಗಗನಕ್ಕೇರಿದೆ ಇದರ ವಿರುದ್ದ ಮಾತನಾಡಿದರೆ ಟಾರ್ಗೆಟ್ ಮಾಡಿ ಅವರಿಗೆ ತೊಂದರೆ ಕೊಟ್ಟು ಹತ್ತಿಕ್ಕುವ ಮೂಲಕ ಸರಕಾರದ ವಿರುದ್ದ ಮಾತನಾಡುವವರನ್ನು ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಾರೆ. ಮಹಿಳಾ ಕಾಂಗ್ರೆಸ್ ಪಕ್ಷ ಇವತ್ತು ಬಡ ಮಹಿಳೆಯರ ಪರ ಸರಕಾರದ ಕಣ್ಣು ತೆರೆಸಲು ಪ್ರತಿಭಟಿಸಿ ಮನವಿ ನೀಡಿದೆ ಎಂದರು.

    300x250 AD


    ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪೂಜಾ ನೇತ್ರೆಕರ ತಹಶೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ನೀಡಿ, ಮಾತನಾಡಿ ಇವತ್ತು ಜಗತ್ತಿನಲ್ಲಿ ಕಚ್ಚಾತೈಲ ಬೆಲೆ ಕುಸಿದಿದ್ದರೂ ನಮ್ಮಲ್ಲಿ ಮಾತ್ರ ದಿನೆ ದಿನೇ ಏರುತ್ತಲೆ ಇದೆ. ಇದರಿಂದ ಜನಸಾಮಾನ್ಯರ ಮೇಲೆ ಆರ್ಥಿಕ ದಬ್ಬಾಳಿಕೆಯಾಗಿದೆ. ಇದರಿಂದ ಜನ ಸಾಮಾನ್ಯರು ಬದುಕುವುದೇ ಕಷ್ಟವಾಗಿದೆ ಒಂದಡೆ ಕರೋನಾದಿಂದ ತೊಂದರೆಯಲ್ಲಿದ್ದಾರೆ. ಈ ಸರಕಾರದ ದಮನಕಾರಿ ನೀತಿಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರಕಾರ ಎಚ್ಚೆತ್ತು ಕೊಂಡು ಗ್ಯಾಸ್,ತೈಲದರ ಇಳಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡುವದು ಅನಿವಾರ್ಯವಾದೀತು ಎಂದರು.


    ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರವಿ ನಾಯ ಪ್ರಧಾನ ಕಾರ್ಯದರ್ಶಿ ಅನಿಲ್ ಮರಾಠೆ, ಪ.ಪಂ ಕೈಸರ ಸೈದ್ ಅಲಿ, ಸರಸ್ವತಿ ಗುನಗಾ, ವಕೀಲರಾದ ಅಮೀನಾ ಶೇಖ್ ಮುಸರತ್ ಶೇಖ್ ಸೇರಿದಂತೆ 30ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು

    Share This
    300x250 AD
    300x250 AD
    300x250 AD
    Leaderboard Ad
    Back to top