ಯಲ್ಲಾಪುರ: ಸರಕಾರಿ ನಿವೃತ್ತ ನೌಕರರ ಸಂಘದ ಯಲ್ಲಾಪುರ ಘಟಕದ ಕಾರ್ಯದರ್ಶಿಯಾಗಿ ನಿವೃತ್ತ ವಲಯ ಅರಣ್ಯಾಧಿಕಾರಿ ಸುರೇಶ ಬೋರಕರ ಸರ್ಮಾನುಮತದಿಂದ ಆಯ್ಕೆಯಾಗಿದ್ದಾರೆ.
ರವಿವಾರದಂದು ಸರಕಾರಿ ನೌಕರರ ಭವನದಲ್ಲಿ ನಡೆದ ಸಭೆಯಲ್ಲಿ ಸಂಘದ ಅಧ್ಯಕ್ಷ ಶ್ರೀರಂಗ ಕಟ್ಟಿ, ಈ ಘೋಷಣೆ ಮಾಡಿದರು. ಇದೇ ಸಂದರ್ಭದಲ್ಲಿ ನೂತನ ಕಾರ್ಯದರ್ಶಿ ಬೋರಕರರಿಗೆ ಸಂಘದ ನಗದು ಪುಸ್ತಕ ಮತ್ತು ಇತರೆ ದಾಖಲೆಗಳನ್ನು ಹಸ್ತಾಂತರಿಸಲಾಯಿತು. ಹಿಂದಿನ ಕಾರ್ಯದರ್ಶಿ, ಪ್ರೇಮಾನಂದ ಕಟಗಿಯವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಸಭೆಯಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು.
ವೈಟಿಎಸ್‍ಎಸ್ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಜಯರಾಮ ಗುನಗಾರನ್ನು ಸಂಘದ ನೂತನ ಸದಸ್ಯರಾಗಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಆರ್.ಎನ್. ನಾಯ್ಕ, ಗೌರವಾಧ್ಯಕ್ಷ ಕೆ.ಕೆ.ನಾಯ್ಕ, ಮಾಜಿ ಉಪಾಧ್ಯಕ್ಷ ಪಾಂಡು ಮರಾಠೆ, ಮಾಜಿ ಕಾರ್ಯದರ್ಶಿ ಕೊಳಂಬಕರ ಮುಂತಾದವರು ಉಪಸ್ಥಿತರಿದ್ದರು.