• Slide
    Slide
    Slide
    previous arrow
    next arrow
  • ಕನ್ನಡದ ಪ್ರಸಿದ್ದ ಕಾವ್ಯಕ್ಕೆ ಯಕ್ಷಗಾನ ಸ್ಪರ್ಷ

    300x250 AD


    ಸಿದ್ದಾಪುರ: ಕನ್ನಡ ಸಾಹಿತ್ಯದಲ್ಲಿ ಯಕ್ಷಗಾನದ ಸಾಹಿತ್ಯ ಕೂಡ‌ ಮುಖ್ಯವಾಹಿನಿಗೆ ಸೇರ್ಪಡೆಯಾಗಬೇಕು ಎಂಬ ಕಾರಣಕ್ಕೆ ಪ್ರಥಮ ಹಂತದಲ್ಲಿ ಕನ್ನಡದ ಪ್ರಸಿದ್ದ ಕವಿಗಳ ಪದ್ಯಗಳಿಗೆ ಯಕ್ಷ ‘ಗಾನ’ದ ಸ್ಪರ್ಷ ನೀಡುವ ಕಾರ್ಯವನ್ನು ಸಿದ್ದಾಪುರದ ಶ್ರೀ ಅನಂತ‌ ಯಕ್ಷ ಕಲಾ ಪ್ರತಿಷ್ಠಾನ ನಡೆಸಿತು.


    ಬೆಂಗಳೂರಿನ‌ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಕನ್ನಡದ ಪ್ರಸಿದ್ದ ಕವಿಗಳ ಪದ್ಯಗಳಿಗೆ ಪ್ರಸಿದ್ದ ಕಲಾವಿದರ ಮೂಲಕ ಯಕ್ಷಗಾನದ ಹೊದಿಕೆ ನೀಡುವ ಪ್ರಯೋಗ ನಡೆಸಲಾಯಿತು. ಈ ಪ್ರಯೋಗ ನಡೆಸಲು ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಆಶಯ ವ್ಯಕ್ತಪಡಿಸಿದ್ದರೆ, ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಪ್ರೋ. ಎಂ.ಎ.ಹೆಗಡೆ ಅವರು ಪದ್ಯಗಳನ್ನು ಆಯ್ಕೆ ಮಾಡಿಕೊಟ್ಟಿದ್ದರು.


    ಕೆ.ಎಸ್.ನರಸಿಂಹ ಸ್ವಾಮಿ, ಪಂಜೆ‌ ಮಂಗೇಶರಾಯರು, ಗೋಪಾಲಕೃಷ್ಣ ಅಡಿಗರು, ಸಿದ್ದಲಿಂಗಯ್ಯ ಅವರ ಕಾವ್ಯಗಳ ತನಕ ಹಾಡಲಾಯಿತು. ಪಡುವಣ‌ ಕಡಲಿಗೆ ಕು.ತುಳಸಿ ಹೆಗಡೆ, ಎಲ್ಲಿ ಭೂ ರಮೆ ದೇವ ಸನ್ನಿಧಿ ಹಾಡಿಗೆ ಹಿರಿಯ ಕಲಾವಿದ ವಿನಾಯಕ ಹೆಗಡೆ ಕಲಗದ್ದೆ ನರ್ತನ‌ ಕೂಡ ಮಾಡಿದರು.


    ಪ್ರಸಿದ್ದ ಭಾಗವತ ಕೇಶವ ಹೆಗಡೆ ಕೊಳಗಿ ಅವರ ಗಾನದಲ್ಲಿ ಯಕ್ಷಗಾನದ ಮಟ್ಟು ತಿಟ್ಟಿನಲ್ಲೇ ಕನ್ನಡದ ಪ್ರಸಿದ್ದರ ಕಾವ್ಯಗಳು ಬಿಚ್ಚಿಕೊಂಡರೆ ಮದ್ದಲೆಯಲ್ಲಿ ಶಂಕರ ಭಾಗವತ್, ಚಂಡೆಯಲ್ಲಿ ವಿಘ್ನೇಶ್ವರ ಗೌಡ, ಪ್ರಸಾದನದಲ್ಲಿ ವೆಂಕಟೇಶ ಬೊಗ್ರಿಮಕ್ಕಿ ಸಹಕಾರ ನೀಡಿದರು. ಇದಕ್ಕೂ‌ ಮುನ್ನ ಭರತ‌ ಮತ್ತು ರಾಮನ ಕುರಿತಾದ ತಾಳ ‌ಮದ್ದಲೆಯ ವೈಭವ ನಡೆಯಿತು.

    300x250 AD


    ಇದಕ್ಕೂ‌ ಮುನ್ನ ಚಾಲನೆ ನೀಡಿದ ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ಯಕ್ಷಗಾನ ಸಾಹಿತ್ಯ ಗುರುತಾಗಬೇಕು. ಈ‌ಕಾರಣದಿಂದ ಇದೊಂದು ಅಪರೂಪದ ಪ್ರಯೋಗ ಎಂದರು.


    ವೇದಿಕೆಯಲ್ಲಿ ವಿನಾಯಕಬಹೆಗಡೆ ಕಲಗದ್ದೆ, ವಿನಯ ಹೆಗಡೆ ಹೊಸ್ತೋಟ, ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ, ವಿಘ್ನೇಶ್ವರ ಗೌಡ ವೆಂಕಟೇಶ ಹೆಗಡೆ ಬಗ್ರಿಮಕ್ಕಿ ಇತರರು ಇದ್ದರು

    Share This
    300x250 AD
    300x250 AD
    300x250 AD
    Leaderboard Ad
    Back to top