ಮುಂಡಗೋಡ: ತಾಲೂಕಿನ ಮಳಗಿಯ ಧರ್ಮಾ ಜಲಾಶಯದ ಬಳಿ ನಕಲಿ ಬಂಗಾರದ ವಂಚನೆ ಪ್ರಕರಣವನ್ನು ಪೆÇಲೀಸರು ಬೇಧಿಸಿದ್ದು, ಆರು ಜನ ಆರೋಪಿಗಳನ್ನು ಜಿಲ್ಲಾ ಪೆÇಲೀಸರು ಬಂಧಿಸಿದ್ದಾರೆ.
ಜಲಾಶಯಕ್ಕೆ ಬರುವಂತೆ ಹೇಳಿ ಬೆಳಗಾವಿಯ ಚಿಕ್ಕೋಡಿ ಮೂಲದ ಶಿವಗೌಡ ಮಾದೇಗೌಡ ಪಾಟೀಲ್ ಅವರಿಂದ ನಕಲಿ ಬಂಗಾರನ್ನು ತೋರಿಸಿ 22.50 ಲಕ್ಷ ರೂ. ದೋಚಲಾಗುತ್ತು. ಪ್ರಕರಣದ ತನಿಖೆ ಆರಂಭಿಸಿದ ಬಳಿಕ ಆರೋಪಿಗಳಾದ ವಿರೇಶ ತಿರ್ಥಪ್ಪ, ವೆಂಕಟೇಶ ಸಣ್ಣವೀರಪ್ಪ, ಕುಮಾರ್ ಗದಿಗೆಪ್ಪ, ತೀರ್ಥಪ್ಪಗದಿಗೆಪ್ಪ, ಶಿಕಾರಿಪುರದ ವಿದ್ಯಾಧರ ಮೇಧಾರ ಹಾಗೂ ಪ್ರಶಾಂತ ವಿರೇಶ ಎನ್ನುವವನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳಿಂದ ಒಟ್ಟು 19 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಪ್ರಕರಣದ ಇನ್ನೊಬ್ಬ ಆರೋಪಿ ಪರಾರಿಯಾಗಿದ್ದು ಶೀಘ್ರವೇ ಬಂಧಿಸಲಾಗುವುದು ಎಂದು ಪೆÇಲೀಸರು ಮಾಹಿತಿ ನೀಡಿದ್ದಾರೆ.