• first
    second
    third
    previous arrow
    next arrow
  • ಕೊರೊನಾ ಜಾಗೃತಿಗೆ ಬೀದಿನಾಟಕ ಪ್ರದರ್ಶನ

    300x250 AD

    ಯಲ್ಲಾಪುರ: ಪಟ್ಟಣದ ತಟಗಾರ ಕ್ರಾಸ್ ಬಳಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಕೊರೊನಾ ಜಾಗೃತಿಗಾಗಿ ಬೀದಿನಾಟಕ ಪ್ರದರ್ಶನ ನಡೆಯಿತು.


    ಪ.ಪಂ ಸದಸ್ಯೆ ಗೀತಾ ದೇಶಭಂಡಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯೋಜನೆಯ ಕೃಷಿ ಮೇಲ್ವಿಚಾರಕ ಸತೀಶ ನಾಯ್ಕ ಮಾತನಾಡಿ, ಕೊರೊನಾ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಕೊರೊನಾ ನಿರ್ಮೂಲನೆಗೆ ನಮ್ಮಿಂದಾದ ಸಹಕಾರ ನೀಡುವ ಉದ್ದೇಶದಿಂದ ಬೀದಿ ನಾಟಕ ಪ್ರದರ್ಶಿಸಲಾಗುತ್ತಿದೆ ಎಂದು ವಿವರಿಸಿದರು.

    300x250 AD


    ಜ್ಞಾನವಿಕಾಸ ಸಮನ್ವಯಾಧಿಕಾರಿ ಚೈತ್ರಾ, ಪತ್ರಕರ್ತರಾದ ಶ್ರೀಧರ ಅಣಲಗಾರ, ಕೇಬಲ್ ನಾಗೇಶ ಮಾತನಾಡಿದರು. ಒಕ್ಕೂಟದ ಅಧ್ಯಕ್ಷೆ ಶಕುಂತಲಾ ಭಟ್ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಜ್ಯೋತಿ ಪಾಟಣಕರ್ ನಿರ್ವಹಿಸಿದರು. ದಾವಣಗೆರೆಯ ಶ್ರುತಿ ಕಲಾ ತಂಡದ ವೆಂಕಟೇಶ ನೇತೃತ್ವದ ಕಲಾವಿದರು ಬೀದಿ ನಾಟಕ ಪ್ರದರ್ಶನದ ಮೂಲಕ ಕೊರೊನಾ ಜಾಗೃತಿ ಮೂಡಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top