ಸಿದ್ದಾಪುರ: ಬೆಳಕು ನೀಡುವ ಸೆಲ್ಕೋ ಸೋಲಾರ್ ಸಂಸ್ಥೆ ನಡೆಸುವ ಸಮಾಜಮುಖಿ ಕಾರ್ಯ ದೊಡ್ಡದು ಎಂದು ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಐನಕೈ ಹೇಳಿದರು.
ಬೆಂಗಳೂರಿನ ಸೆಲ್ಕೋ ಸಂಸ್ಥೆಯು ತಾಲೂಕಿನ ಕಲಗದ್ದೆಯ ಶ್ರೀ ನಾಟ್ಯ ವಿನಾಯಕ ದೇವಸ್ಥಾನದ ರಂಗ ಮಂಟಪಕ್ಕೆ ಕೊಡುಗೆಯಾಗಿ ನೀಡದ ಸೋಲಾರ್ ವಿದ್ಯುತ್ ಘಟಕದ ಸಮರ್ಪಣೆ ನಡೆಸಿ ಮಾತನಾಡಿದರು. ಸೆಲ್ಕೋ ನಮ್ಮ ಕರ್ನಾಟಕದ ಸಂಸ್ಥೆ. ಇವರ ಸೇವೆಯನ್ನು ಈಶಾನ್ಯ ಭಾರತದಲ್ಲಿ ನೋಡಬೇಕು. ಅಂತಹ ರಾಜ್ಯಗಳಲ್ಲೂ ಇಡೀ ತಂಡದ ಕಾರ್ಯ ಉಲ್ಲೇಖಿಸಲೇ ಬೇಕಾದದ್ದು. ಅಲ್ಲಿನ ಜನರಿಗೆ ಸೌರ ಶಕ್ತಿ ಒದಗಿಸಿ ನೆಮ್ಮದಿ ನೀಡಲು ಯತ್ನಿಸಿದೆ ಎಂದು ಹೇಳಿದರು. ಕೇವಲ ಪರಿಸರ ಸ್ನೇಹಿ ವಿದ್ಯುತ್ ಮಾತ್ರ ಕೊಡದೇ ರಚನಾತ್ಮಕವಾಗಿ ಕೂಡ ತೊಡಗಿಕೊಂಡಿದೆ. ಸಂಸ್ಥೆ ಜನರ ಸಂಕಷ್ಟ ನಿವಾರಣೆಗೆ ಅನೇಕ ಕೆಲಸಗಳನ್ನು ಮಾಡಿದೆ ಎಂದು ಹೇಳಿದರು.
ವಾಗ್ಮಿ ಜಿ.ಎಲ್.ಹೆಗಡೆ ಕುಮಟಾ, ಸೆಲ್ಕೋ ದುಡಿದ ಹಣದಲ್ಲಿ ಸಮಾಜಕ್ಕೂ ದೊಡ್ಡ ಪ್ರಮಾಣದಲ್ಲಿ ನೀಡುತ್ತಿದೆ. ನೂರಾರು ಕೋಟಿ ರೂಪಾಯಿ ವಹಿವಾಟು ನಡೆಸುತ್ತಲೇ ಅನೇಕ ರೈತ ಪರ ಸಂಶೋಧನೆ ಕೂಡ ನಡೆಸಿ ರೈತ ಸ್ನೇಹಿಯೂ ಆಗಿದೆ ಎಂದರು.
ದೇವಸ್ಥಾನದ ಮೊಕ್ತೇಸರ ವಿನಾಯಕ ಹೆಗಡೆ ಕಲಗದ್ದೆ ಸೆಲ್ಕೋ ಸಂಸ್ಥೆ ದೇವಸ್ಥಾನಕ್ಕೆ ಈ ಘಟಕ ನೀಡಿದ್ದು, ನಿರಂತರ ಧಾರ್ಮಿಕ, ಸಾಂಸ್ಕ್ರತಿಕ ಕಾರ್ಯಕ್ರಮ ನಡೆದಲು ಅನುಕೂಲ ಆಗಿದೆ ಎಂದರು. ಪ್ರಾದೇಶಿಕ ವ್ಯವಸ್ಥಾಪಕ ದತ್ತಾತ್ರಯ ಭಟ್ಟ, ಶಿರಸಿ ಶಾಖಾ ವ್ಯವಸ್ಥಾಪಕ ಸುಬ್ರಾಯ ಹೆಗಡೆ, ನಾಗರಾಜ್ ಜೋಶಿ ಸೋಂದಾ, ಭಾಗವತ ಕೇಶವ ಹೆಗಡೆ, ರಷ್ಮಿ ಹೆಗಡೆ ಇತರರು ಇದ್ದರು. ಗಣಪತಿ ಗುಂಜಗೋಡ ನಿರ್ವಹಿಸಿದರು