ಕಾರವಾರ: ಜಿಲ್ಲೆಯಲ್ಲಿ ಸೆ.6 ಸೋಮವಾರ ಒಟ್ಟು 44,500 ಕೋವಿಡ್ ಲಸಿಕೆ ಲಭ್ಯವಿದೆ. 41,800 ಕೋವಿಶೀಲ್ಡ್ ಮತ್ತು 2,700 ಕೋವ್ಯಾಕ್ಸಿನ್ ಲಭ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಂಕೋಲಾದಲ್ಲಿ 4 ಸಾವಿರ, ಭಟ್ಕಳ 4 ಸಾವಿರ, ಹೊನ್ನಾವರ 5 ಸಾವಿರ, ಕಾರವಾರ 2 ಸಾವಿರ, ಮುಂಡಗೋಡ 2 ಸಾವಿರ, ಕುಮಟಾ 5 ಸಾವಿರ, ಶಿರಸಿ 5 ಸಾವಿರ, ಸಿದ್ದಾಪುರ 4 ಸಾವಿರ, ಯಲ್ಲಾಪುರ 2 ಸಾವಿರ, ದಾಂಡೇಲಿ 1 ಸಾವಿರ, ಮತ್ತು ಜಿಲ್ಲಾಸ್ಪತ್ರೆಯಲ್ಲಿ 800 ಕೋವಿಶೀಲ್ಡ್ ಲಸಿಕೆ ಲಭ್ಯವಿದೆ.
ಅಲ್ಲದೆ, ಹಳಿಯಾಳದಲ್ಲಿ 500, ಹೊನ್ನಾವರ 300, ಕುಮಟಾ 300, ಶಿರಸಿ 1 ಸಾವಿರ, ದಾಂಡೇಲಿ 200, ಜಿಲ್ಲಾಸ್ಪತ್ರೆಯಲ್ಲಿ 400 ಕೋವಿಶೀಲ್ಡ್ ಲಸಿಕೆ ಲಭ್ಯವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.