ಮುಂಡಗೋಡ: ನಕಲಿ ನೇಮಕಾತಿ ಆದೇಶವನ್ನು ಕೊಟ್ಟು ಪೆÇಲೀಸ್ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಒಟ್ಟು 12 ಜನರಿಂದ 25 ಲಕ್ಷ ರೂಪಾಯಿಯನ್ನು ಪಡೆದುಕೊಂಡು, ವಂಚಿಸಿದ ಆರೋಪಿಯನ್ನು ಪೆÇಲೀಸರು ಶನಿವಾರ ಬಂಧಿಸಿದ್ದಾರೆ.
ಸಂತೋಷ ತಿಪ್ಪಣ್ಣ ಗುದಗಿ ಬಂಧಿತ ಆರೋಪಿತನಾಗಿದ್ದಾನೆ. ಈತನು ಹಾವೇರಿ ಜಿಲ್ಲೆಯ ಬ್ಯಾಡಗಿಯ ಬಸವೇಶ್ವರ ನಗರ ನಿವಾಸಿ.
ಆರೋಪಿತ ಸಂತೋಷ ಬೆಂಗಳೂರು ನಗರದಲ್ಲಿ ಪೆÇಲೀಸ್ ಇರುವುದಾಗಿ ನಂಬಿಸಿ, ನಕಲಿ ಆದೇಶದ ಪ್ರತಿ ತಯಾರು ಮಾಡಿ ವಂಚಿಸುತ್ತಿದ್ದ. ಇದರಂತೆ ಗೋಕಾಕ, ಧಾರವಾಡ, ಶಿಗ್ಗಾವಿ, ವಿಜಯಪುರ, ಶಿವಮೊಗ್ಗ, ಬಾಗಲಕೋಟಿಯ ಒಟ್ಟು 12 ಯುವಕರು ನೌಕರಿ ಸಿಗುವ ಆಸೆಗೆ ಮರುಳಾಗಿ ಮೋಸ ಹೋಗಿದ್ದಾರೆ ಎನ್ನಲಾಗಿದೆ. ಆರೋಪಿತನು ಈ ಹಿಂದೆ ಬೆಂಗಳೂರಿನಲ್ಲಿ ಪೆÇಲೀಸ್ ಸಿಬ್ಬಂದಿಯಾಗಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ, ಇದೇ ರೀತಿ ಮೋಸ ಮಾಡಿದ್ದರಿಂದ ಸೇವೆಯಿಂದ ತೆಗೆದು ಹಾಕಲಾಗಿತ್ತು.
ಪಟ್ಟಣದ ಯುವಕ ಗುರುರಾಯ ರಾಯ್ಕರ ಎಂಬುವರು, ನೌಕರಿ ಸಿಗುವ ಆಸೆಗೆ ಮರುಳಾಗಿ, ಆರೋಪಿತ ಸಂತೋಷನಿಗೆ ಒಟ್ಟು 2ಲಕ್ಷ ರೂಪಾಯಿ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ. ಖೊಟ್ಟಿ ನೇಮಕಾತಿ ಆದೇಶವನ್ನು ನೀಡಿ ಆರೋಪಿ ವಂಚಿಸಿದ್ದಾನೆ. ಮೋಸ ಹೋದ ಯುವಕ ಗುರುರಾಯ ಪೆÇಲೀಸ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣವನ್ನು ಬೆನ್ನಟ್ಟಿ ಆರೋಪಿತನ ಬಂಧನಕ್ಕೆ ಬಲೆ ಬಿಸಿದ್ದರು, ಅದರಂತೆ ಆರೋಪಿತನನ್ನು ಪತ್ತೆ ಹಚ್ಚಿದ್ದಾರೆ. ಸಿಪಿಐ ಪ್ರಭುಗೌಡ ಡಿ.ಕೆ, ಪಿಎಸೈ ಬಸವರಾಜ ಮಬನೂರ, ಪಿಎಸೈ ಎನ್.ಡಿ.ಜಕ್ಕಣ್ಣವರ್ ಹಾಗೂ ಸಿಬ್ಬಂದಿ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.