• Slide
  Slide
  Slide
  previous arrow
  next arrow
 • ಶಿಕ್ಷಕ ಇತರರಿಗೆ ಆದರ್ಶವಾಗಿರಬೇಕು; ಪ್ರಕಾಶ ಹೀರೆಮಠ

  300x250 AD

  ಜೊಯಿಡಾ: ಒಬ್ಬ ಶಿಕ್ಷಕನಿಗೆ ವ್ಯಕ್ತಿತ್ವ ಬಹಳ ಮುಖ್ಯವಾದದ್ದು. ಇಡಿ ಶಿಕ್ಷಕರಿಗೆ ಆದರ್ಶಪ್ರಾಯರಾದವರು ಸರ್ವಪಲ್ಲಿ ರಾಧಾಕೃಷ್ಣ ಅವರು. ಇವರ ವ್ಯಕ್ತಿತ್ವ, ಆದರ್ಶ ನಮಗೆಲ್ಲ ಸ್ಪೂರ್ತಿದಾಯಕವಾದದ್ದು, ಪ್ರತಿ ನಿತ್ಯದ ದಿಕ್ಸೂಚಿಯಾಗಿ ಇಂಥಹ ವ್ಯಕ್ತಿಗಳ ಮಾರ್ಗದಲ್ಲಿ ಶಿಕ್ಷಕರು ಸಾಗಬೇಕು ಎಂದು ಜೊಯಿಡಾ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ಹೀರೆಮಠ ಹೇಳಿದರು.


  ಅವರು ಜೊಯಿಡಾ ಶ್ರೀರಾಮ ಪ್ರೌಡ ಶಾಲೆಯಲ್ಲಿ ನಡೆದ ಶಿಕ್ಷಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕ್ಷೇತ್ರ ಸಮನ್ವಯಾಧಿಕಾರಿ ದಿನೇಶ ಶೇಟ ಮಾತನಾಡಿ ಎಲ್ಲ ವೃತ್ತಿಗಿಂತ ಸಂತೃಪ್ತಿ,ಸಮಾಧಾನ ನೀಡುವ ವೃತ್ತಿ ಶಿಕ್ಷಕ ವೃತ್ತಿ. ಅತ್ಯಂತ ಪ್ರಾಚೀನವಾದ ಸಂಸ್ಕøತಿ ನಮ್ಮ ಶಿಕ್ಷಣ ಪದ್ಧತಿ. ಈ ವೃತ್ತಿಯಲ್ಲಿ ಎಲ್ಲರೂ ಉತ್ತಮ ಸಾಧನೆಯನ್ನ ಮಾಡಲಿ ಎಂದರು.

  300x250 AD


  ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ಹೀರೇಮಠ, ಕ್ಷೇತ್ರ ಸಮನ್ವಯಾಧಿಕಾರಿ ದಿನೇಶ ಶೇಟ,ತಾಲೂಕಾ ನೌಕರ ಸಂಘದ ಅಧ್ಯಕ್ಷ ಸಂತೋಷ ಸಾಳುಂಕೆ ಮತ್ತು ತಾಲೂಕಿನ ಸಿಆರ್‍ಪಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ಎಲ್ಲ ಶಿಕ್ಷಕರಿಗೆ ಯುವ ಬ್ರೀಗೇಡ ಗಣೇಶ ಹೆಗಡೆ ತಂಡದಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.


  ಈ ಸಂಧರ್ಬದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ಹೀರೇಮಠ, ಕ್ಷೇತ್ರ ಸಮನ್ವಯಾಧಿಕಾರಿ ದಿನೇಶ ಶೇಟ,ಶಿಕ್ಷಕ ಸಂಘದ ಅಧ್ಯಕ್ಷ ಯಶವಂತ ನಾಯ್ಕ,ಆರ್.ಪಿ ಗೌಡಾ,ಶ್ರೀರಾಮ ಪ್ರೌಡ ಶಾಲೆ ಶಿಕ್ಷಕ ಆರ್.ಆರ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top