• first
  second
  third
  previous arrow
  next arrow
 • ಶಿಕ್ಷಣ ಸಾಹಿತ್ಯಕ್ಕೆ ಅವಿನಾಭಾವ ಸಂಬಂಧ; ನಾರಾಯಣ ನಾಯ್ಕ

  300x250 AD

  ಯಲ್ಲಾಪುರ: ಅವಕಾಶಕ್ಕಾಗಿ ಕಾಯದೇ ನಾವೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಮೂಲಕ ಮನೆಯಂಗಳದಲ್ಲಿಯೇ ಶ್ರಾವಣ ಕವನ ಗೋಷ್ಠಿಗಳಂತಹ ಕಾರ್ಯಕ್ರಮಗಳು ಸಾಹಿತ್ಯದ ಬೆಳವಣಿಗೆಗೆ ಪೂರಕವಾಗಿದೆ. ಶಿಕ್ಷಣ ಮತ್ತು ಸಾಹಿತ್ಯ ನಡುವೆ ಅವಿನಾಭಾವ ಸಂಬಂಧವಿದೆ. ಅನೇಕ ಶಿಕ್ಷಕರು ಸಾಹಿತಿಗಳೇ ಆಗಿದ್ದಾರೆ ಎಂದು ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ನಾಯ್ಕ ಹೇಳಿದರು.


  ಅವರು ಶನಿವಾರ ಸಂಜೆ ಜಿಲ್ಲಾ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ಪಟ್ಟಣದ ಕಾಳಮ್ಮನಗರದಲ್ಲಿರುವ ಶಿವಶಂಕರ ಸದನದಲ್ಲಿ ಶ್ರಾವಣ ಕವಿಗೋಷ್ಠೀ ಹಾಗೂ ಪತ್ರಿಕಾ ವಿತರಕರಿಗೆ ಗೌರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ಹಾಗೂ ಬರಹಗಾರ ಶ್ರೀರಂಗ ಕಟ್ಟಿ ಮಾತನಾಡಿ ಶ್ರಾವಣವೆಂದರೆ ಸಾಲು ಸಾಲು ಹಬ್ಬಗಳ ಸಂಭ್ರಮ ಗಳ ಮೂಲಕ ಭಾಂದವ್ಯವನ್ನು ಬೆಸೆಯುತ್ತದೆ. ಸಂಬಂಧಗಳ ನವೀಕರಣವೇ ಹಬ್ಬಗಳ ಹುಟ್ಟು ಪ್ರಕೃತಿಯಲ್ಲಿನ ಜಡತ್ವ ನಾಶಮಾಡಿ ಉತ್ಸಾಹವನ್ನು ತುಂಬುವ ಮಾಸ ಶ್ರಾವಣ ಮಾಸ ಎಲ್ಲರಿಗೂ ಅಪ್ಯಾಯ ಮಾನವೆನಿಸಿ ಕವಿತೆಯನ್ನು ಹುಟ್ಟು ಹಾಕುತ್ತದೆ ಎಂದರು.


  ಜಿಲ್ಲಾಧ್ಯಕ್ಷೆ ಶಿವಲೀಲಾ ಹುಣಸಗಿ ಅಧ್ಯಕ್ಷತೆ ವಹಿಸಿ ಮಾತನಾಡಿ ಮತ್ತೊಂದು ಜೀವ ಸೃಷ್ಟಿಗೆ ಕಾರಣಿಕೃತನಾಗಬೇಕು ಅದುವೇ ಶ್ರಾವಣ ಇಂತಹ ಶ್ರಾವಣವನ್ನು ಆರಾಧನೆ ಮಾಡುವಾಗ ನಮ್ಮ ಮನಸ್ಸು ಕೂಡ ಪಕ್ವವಾಗಿರಬೇಕು. ಅದನ್ನು ವಿಜೃಂಭಿಸುವ ಶ್ರಾವಣ ವೈಷಮ್ಯವನ್ನು ಕೆಟ್ಟದನ್ನು ವಿಚಾರ ಮಾಡುವ ಬೇರುಗಳನ್ನು ನಶಿಸಿ ಹೊಸ ಚೈತನ್ಯ ನೀಡುವ ಚಿಗುರು ಶ್ರಾವಣವಾಗಿದೆ ಎಂದರು. ತಾಲೂಕಾ ಪಂಚಾಯತಿ ಮಾಜಿ ಅಧ್ಯಕ್ಷೆ ಭವ್ಯಾ ಶೆಟ್ಟಿ ಮಾತನಾಡಿ ಕವನ ವಾಚಿಸಿದರು. ಇದೆ ಸಂಧರ್ಭದಲ್ಲಿ ಪತ್ರಿಕಾ ವಿತರಕರ ದಿನಾಚಾರಣೆ ನಿಮಿತ್ತ ವಿದ್ಯಾಭ್ಯಾಸ ದೊಂದಿಗೆ ಪತ್ರಿಕೆ ವಿತರಿಸುವ ಕಾಯಕ ಮಾಡುವ ರಾಕೇಶ ಹಾಗೂ ಸಾಗರ ಅವರನ್ನು ಪುಸ್ತಕ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ನಂತರ ಕವಿಗೋಷ್ಠೀ ನಡೆಯಿತು.

  300x250 AD


  ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶೀ ಶ್ರೀಧರ ಅಣಲಗಾರ, ಸದಸ್ಯರಾದ ಸುಬ್ರಾಯ ಬಿದ್ರೆಮನೆ, ಜಯರಾಜ ಗೋವಿ, ಸಂಘಟಕ ಶಂಕರ ನಾಯ್ಕ ಮುಂತಾದವರು ಇದ್ದರು.


  ತಾಲೂಕಾಧ್ಯಕ್ಷ ನವೀನಕುಮಾರ ನಿರ್ವಹಿಸಿದರು. ಮಾವಿನಮನೆ ಹಿಪ್ರಾಶಾ ಶಿಕ್ಷಕಿ ಸವಿತಾ ಪ್ರಾರ್ಥಿಸಿದರು. ಜಿಲ್ಲಾ ಸಂಚಾಲಕಿ ಪ್ರಭಾವತಿ ಗೋವಿ ಸ್ವಾಗತಿಸಿದರು.
  ಕಾರ್ಯದರ್ಶಿ ನಾಗೇಶ ಪ್ರಸ್ತಾವಿಕ ಮಾತನಾಡಿದರು. ಸಹಕಾರ್ಯದರ್ಶಿ ಸುನಂದಾ ಪಾಠಣಕರ ವಂದಿಸಿದರು.

  Share This
  300x250 AD
  300x250 AD
  300x250 AD
  Back to top