• first
    second
    third
    previous arrow
    next arrow
  • ಬೆಲೆ ಬಾಳುವ ಮೊಬೈಲ್-ಕ್ಯಾಮೆರಾ ದೋಚಿದ ಕಳ್ಳರು; ಪ್ರಕರಣ ದಾಖಲು

    300x250 AD

    ಮುಂಡಗೋಡ: ಹಂಚು ಹಾಗೂ ತಗಡು ತೆಗೆದು ಮೊಬೈಲ್ ಶಾಪ್ ಹಾಗೂ ಫೆÇೀಟೊ ಸ್ಟುಡಿಯೋದಲ್ಲಿನ ಬೆಲೆಬಾಳುವ ಮೊಬೈಲ್, ಕ್ಯಾಮರಾಗಳನ್ನು ಹೊತ್ತೊಯ್ದಿರುವ ಘಟನೆ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

    300x250 AD

    ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿರುವ ಶ್ರೀ ಮೊಬೈಲ್ ಸೇಲ್ಸ್ ಮತ್ತು ಸರ್ವಿಸ್ ಹಾಗೂ ಶ್ರೀ ಶಕ್ತಿ ಫೆÇೀಟೊ ಸ್ಟುಡಿಯೋ ಗೆ ತಡರಾತ್ರಿ ಮೇಲ್ಛಾವಣಿಯ ಹಂಚು ಹಾಗೂ ತಗೆಡು ತೆಗೆದು ನುಗ್ಗಿದ ಖದೀಮರು ಅಂಗಡಿಯಲ್ಲಿದ್ದ ಬೆಲೆಬಾಳುವ ಮೊಬೈಲ್ ಹಾಗೂ ಕ್ಯಾಮಾರಾ ಸೇರಿದಂತೆ ಹಲವು ವಸ್ತುಗಳನ್ನು ಹೊತ್ತೊಯ್ದಿದ್ದಾರೆ.
    ಆದರೆ ಮೊಬೈಲ್ ಶಾಪ್ ನಲ್ಲಿ ಕಳ್ಳನ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇನ್ನು ಕಳೆದ ಕೆಲ ದಿನಗಳ ಹಿಂದಷ್ಟೇ ಇಲ್ಲಿನ ವೈನ್ ಶಾಪ್ ಗೆ ಕನ್ನ ಹಾಕಿದ್ದ ಖದೀಮರು, ಇದೀಗ ಮತ್ತೆರಡು ಅಂಗಡಿ ದೋಚಿದ್ದಾರೆ.
    ಪಟ್ಟಣದಲ್ಲಿ ಕಳೆದ ಎರಡು ವಾರದಲ್ಲಿ ಇದು ಎರಡನೇ ಘಟನೆಯಾಗಿದ್ದು ಸರಣಿ ಕಳ್ಳತದಿಂದ ಜನ ಕೂಡ ಭಯಭೀತರಾಗಿದ್ದಾರೆ. ಘಟನೆ ಬಳಿಕ ಪೆÇಲೀಸರು ಅಂಗಡಿಗಳಲ್ಲಿ ಪರಿಶೀಲನೆ ನಡೆಸಿದ್ದು, ಮುಂಡಗೋಡ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top