ಶಿರಸಿ: ಎಂಇಎಸ್’ನ ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಗಣಿತಶಾಸ್ತ್ರ ಸ್ನಾತಕೋತ್ತರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಕಾಲೇಜು ಉಪಸಮಿತಿಯ ಸದಸ್ಯ ಜಿಎಸ್ ಹೆಗಡೆ ಆಗಮಿಸಿ ಮಾತನಾಡಿ ಇಂದು ಗಣಿತ ಜೀವನ ಕ್ರಮದಲ್ಲಿ ಅಗತ್ಯವಾಗಿ ಬೇಕಾಗಿರುವ ಜ್ಞಾನವಾಗಿದೆ ಗಣಿತ ವಿಷಯದಲ್ಲಿ ಉನ್ನತ ಶಿಕ್ಷಣ ಪಡೆದ ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದರು.
ಪ್ರಾಚಾರ್ಯೆ ಡಾ.ಕೋಮಲಾ ಭಟ್ ಮಾತನಾಡಿ ಆಳವಾದ ಅಧ್ಯಯನದಿಂದ ನೈಪುಣ್ಯತೆಯನ್ನು ಪಡೆಯಲು ಸಾಧ್ಯ. ಗಣಿತ ಕಬ್ಬಿಣದ ಕಡಲೆ ಅಲ್ಲ ಗಣಿತದ ಕುರಿತಾಗಿ ಒಲವು ಮೂಡಿಸುವ ಕೆಲಸ ಆಗಬೇಕು ಎಂದರು.
ಪೆÇ್ರ ಮಹಿಮಾ ಗಾಯತ್ರಿ ಪ್ರಾಸ್ತಾವಿಸಿ ಸ್ವಾಗತಿಸಿದರು. ಪ್ರಭು ನಿರೂಪಿಸಿದರು. ಛಾಯಾ ವಂದಿಸಿದರು.