• Slide
    Slide
    Slide
    previous arrow
    next arrow
  • ಸನಾತನ ಪರಂಪರೆ-ಸಂಪ್ರದಾಯ ಉಳಿಯುವ ಕಾರ್ಯವಾಗಲಿ; ವನಜಾಕ್ಷಿ ಹೆಬ್ಬಾರ್

    300x250 AD

    ಯಲ್ಲಾಪುರ: ಸುಜ್ಞಾನ ನೆಟ್‍ವರ್ಕ್ ಯಲ್ಲಾಪುರ ಅವರ ಇ-ಯಲ್ಲಾಪುರ.ಕಾಮ್ ವತಿಯಿಂದ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಶ್ರೀಕೃಷ್ಣ ವೇಷ ಫೆÇೀಟೊ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣಾ ಸಮಾರಂಭ ಶನಿವಾರ ಯಲ್ಲಾಪುರ ಪಟ್ಟಣದ ಅಡಕೆ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರ ಧರ್ಮಪತ್ನಿ ವನಜಾಕ್ಷಿ ಹೆಬ್ಬಾರ್ ಉದ್ಘಾಟಿಸಿದರು.


    ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಸ್ಫರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ನಮ್ಮ ಸನಾತನ ಪರಂಪರೆ, ಭಾರತೀಯ ಸಂಸ್ಕøತಿ, ಸಂಪ್ರದಾಯವನ್ನು ಪ್ರತಿನಿಧಿಸುವ ಇಂತಹ ಕಾರ್ಯಕ್ರಮವನ್ನು ಏರ್ಪಡಿಸಿರುವುದು ಅತ್ಯಂತ ಶ್ಲಾಘನೀಯವಾಗಿದೆ. ಮಕ್ಕಳು ದೇವರ ಪ್ರತಿರೂಪ. ಇಂತಹ ಸ್ಫರ್ಧಾ ಕಾರ್ಯಕ್ರಮವನ್ನು ಏರ್ಪಡಿಸುವುದರಿಂದ ಮಕ್ಕಳಲ್ಲಿ ನಮ್ಮ ಸಂಸ್ಕøತಿ, ಧರ್ಮಪ್ರಜ್ಞೆ ಜಾಗ್ರತವಾಗಲು ಸಹಕಾರಿಯಾಗುತ್ತದೆ ಎಂದರು.


    ಗೌತಮ ಜುವೆಲ್ಲರ್ಸ್ ಮಾಲಕ ಪ್ರಕಾಶ ಶೇಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ.ಪಂ.ಅಧ್ಯಕ್ಷೆ ಸುನಂದಾ ದಾಸ್, ಪ್ರಮುಖರಾದ ತಾಲೂಕಾ ಭಾರತ ಸೇವಾದಳದ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ನಾಯಕನಕೆರೆ ಶಾರದಾಂಬಾ ದೇವಾಲಯದ ಅಧ್ಯಕ್ಷ ಡಿ.ಶಂಕರ ಭಟ್, ಸ್ಫರ್ಧೆಯ ತೀರ್ಪುಗಾರರಾದ ನೇತ್ರತಜ್ಞೆ ಡಾ.ಸೌಮ್ಯಾ ಕೆ.ವಿ. ನಿವೃತ್ತ ಪ್ರಾಂಶುಪಾಲರಾದ ಬೀರಣ್ಣ ನಾಯಕ ಮೊಗಟಾ, ಜಯರಾಮ ಗುನಗಾ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ, ವಾಯ್.ಟಿ.ಎಸ್.ಎಸ್. ಕಾಲೇಜಿನ ಪ್ರಾಂಶುಪಾಲೆ ವಾಣಿಶ್ರೀ ಹೆಗಡೆ, ನಿವೃತ್ತ ತಹಸೀಲ್ದಾರ್ ಡಿ.ಜಿ.ಹೆಗಡೆ ಮುಂತಾದವರು ಇದ್ದರು.

    300x250 AD


    ಬಿಂದು ವೈದ್ಯ ಪ್ರಾರ್ಥಿಸಿದರು. ಸುಜ್ಞಾನ್ ನೆಟ್‍ವರ್ಕ್ ಮುಖ್ಯಸ್ಥ ಜ್ಯೋತಿರಾದಿತ್ಯ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರಾದ ಶ್ರೀಧರ ಅಣಲಗಾರ, ಜಿ.ಎನ್.ಭಟ್ಟ ತಟ್ಟಿಗದ್ದೆ ನಿರ್ವಹಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top