ಶಿರಸಿ: ಶ್ರೀ ಮಾರಿಕಾಂಬಾ ದೇವಾಲಯದ ಹೊಸ ಆಡಳಿತ ಮಂಡಳಿಯು ಸೇವಾ ದರ ಪರಿಷ್ಕರಣೆ ಮಾಡಿ ಸೂಚನಾ ಫಲಕದಲ್ಲಿ ಕರಡು ಪ್ರತಿ ಪ್ರಕಟಿಸಿತ್ತು. ಈ ಬಗ್ಗೆ ಅನೇಕರಿಂದ ಆಕ್ಷೇಪಣೆ ಪತ್ರ ಬಂದ ಹಿನ್ನೆಲೆಯಲ್ಲಿ ಮುಂದಿನ ಸಭೆಯಲ್ಲಿ ಧರ್ಮದರ್ಶಿ ಮಂಡಳಿ, ಬಾಬುದಾರ ಮುಖ್ಯಸ್ಥರು ಹಾಗೂ ಮೇಲಾಧಿಕಾರಿಗಳು ಮತ್ತು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಭಕ್ತರಿಗೆ ಹೊರೆಯಾಗದಂತೆ ಸೇವಾ ದರವನ್ನು ಪರಿಷ್ಕರಿಸಲಾಗುವುದು ಎಂದು ಶ್ರೀ ದೇವಸ್ಥಾನದ ಅಧ್ಯಕ್ಷ ರವೀಂದ್ರ. ಜಿ. ನಾಯ್ಕ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಶ್ರೀ ಮಾರಿಕಾಂಬಾ ದೇವಸ್ಥಾನ ಸೇವಾ ದರವನ್ನು ಪರಿಷ್ಕರಣೆಯ ಕುರಿತು ಈ ಹಿಂದೆಯೇ ಚರ್ಚೆಯಾಗುತ್ತ ಬಂದಿದ್ದು, ಹೊಸ ಆಡಳಿತ ಮಂಡಳಿಯು ಬಂದ ನಂತರ ಸಭೆಯನ್ನು ನಡೆಸಿ ಇಂದಿನ ದಿನಮಾನಕ್ಕೆ ಅನುಗುಣವಾಗಿ ಸೇವಾ ದರವನ್ನು ಪರಿಷ್ಕರಿಸಿ ಅದನ್ನು ಸಾರ್ವಜನಿಕರ ಗಮನಕ್ಕೆ ತರಲು ದೇವಸ್ಥಾನದ ಸೂಚನಾ ಫಲಕದಲ್ಲಿ ಕರಡು ಪ್ರತಿಯನ್ನು ಪ್ರಕಟಿಸಿ ದಿನಪತ್ರಿಕೆಯಲ್ಲಿ ಪ್ರಚಾರ ಪಡಿಸಿತ್ತು.
ಸೇವಾ ದರ ಪರಿಷ್ಕಣೆಗೆ ಸಂಬಂಧಿಸಿದಂತೆ ಈಗಾಗಲೇ ಸಾರ್ವಜನಿಕರು, ಅಪಸ್ವರ ಎತ್ತಿದ ಬಗ್ಗೆ ಪತ್ರಿಕೆಯಲ್ಲಿ ಹಾಗೂ ಅನೇಕರಿಂದ ಆಕ್ಷೇಪಣೆ ಪತ್ರ ಬಂದ ಬಗ್ಗೆ ಚರ್ಚಿಸಿ ಮುಂದಿನ ಸಭೆಯಲ್ಲಿ ಧರ್ಮದರ್ಶಿ ಮಂಡಳಿ, ಬಾಬುದಾರ ಮುಖ್ಯಸ್ಥರು ಹಾಗೂ ಮೇಲಾಧಿಕಾರಿಗಳು ಮತ್ತು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಭಕ್ತರಿಗೆ ಹೊರೆಯಾಗದಂತೆ ಸೇವಾ ದರವನ್ನು ಪರಿಷ್ಕರಿಸಲಾಗುವುದು.