ಕಾರವಾರ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು 2021-22ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ಸೇವಾಸಿಂಧು ಆನ್‍ಲೈನ್ ಪೆÇೀರ್ಟಲ್ ಮುಖಾಂತರ ಅರ್ಜಿ ಆಹ್ವಾನಿಸಿದ್ದು, ಬಸ್ ನಿಲ್ದಾಣಗಳ ಪಾಸ್ ಕೌಂಟರ್‍ಗಳಲ್ಲಿ ಸೆ.1ರಿಂದ ಬಸ್ ಪಾಸ್ ಪಡೆಯಲು ಅವಕಾಶ ಕಲಿಸಲಾಗಿದೆ.
ವಿದ್ಯಾರ್ಥಿಗಳು ಸೇವಾಸಿಂಧು ಆನಲೈನ್ ಪೆÇೀರ್ಟಲ್ ಮುಖಾಂತರ ಅರ್ಜಿ ಸಲ್ಲಿಸಿ ರಿಯಾಯಿತಿ ಪಾಸ್ ಪಡೆಯಬಹುದಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.