ಶಿರಸಿ: ಇಲ್ಲಿನ ಉಪವಿಭಾಗ ವ್ಯಾಪ್ತಿಯ 220/11 ಕೆ.ವಿ ಹಾಗೂ 110/11 ಕೆ.ವಿ ಉಪಕೇಂದ್ರದಲ್ಲಿ ತುರ್ತು ನಿರ್ವಹಣೆ ಹಾಗೂ ಶಿರಸಿ ಪಟ್ಟಣ ಶಾಖೆಯಲ್ಲಿ ಶಿಥಿಲಗೊಂಡಿರುವ ವಿದ್ಯುತ್ ತಂತಿ ಬದಲಾವಣೆ ಕಾಮಗಾರಿ ಹಾಗೂ 11 ಕೆ.ವಿ ಜಿ.ಓಎಸ್ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಪಟ್ಟಣದ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಸೆ.6 ಸೋಮವಾರ ಬೆಳಿಗ್ಗೆ 10 ರಿಂದ ಸಾಯಂಕಾಲ 6 ರವರೆಗೆ ಎಸಳೆ 220 ಕೆ.ವಿ. ಉಪಕೇಂದ್ರದಿಂದ ಹೊರಡುವ ಗ್ರಾಮೀಣ ಮಾರ್ಗಗಳಾದ ಅಂಡಗಿ, ಭಾಷಿ, ದೊಡ್ನಳ್ಳಿ ಹಾಗೂ ಬಿಸಲಕೊಪ್ಪ 11 ಕೆ.ವಿ ಮಾರ್ಗಗಳಲ್ಲಿ ಹಾಗೂ ಶಿರಸಿ 110 ಕೆ.ವಿ. ಉಪಕೇಂದ್ರದಿಂದ ಹೊರಡುವ ಪಟ್ಟಣ ಮಾರ್ಗಗಳಾದ ಕಸ್ತೂರಬಾನಗರ 11 ಕೆ.ವಿ ಮಾರ್ಗದ ಪ್ರಗತಿ ನಗರ, ಮರಾಠಿಕೊಪ್ಪ, ಕಸ್ತುರಬಾನಗರ, ಗುರುನಗರ, ಯಲ್ಲಾಪುರ ರಸ್ತೆ, ಕೊಪ್ಪಳ ಕಾಲೋನಿ, ವಿದ್ಯಾನಗರ, ವಿವೇಕಾನಂದ ನಗರ, ಕೆ.ಎಚ್.ಬಿ ಕಾಲೋನಿ, ಆದರ್ಶ ನಗರ, ಫಾರೆಸ್ಟ ಕಾಲೋನಿ, ಸಹ್ಯಾದ್ರಿ ಕಾಲೋನಿ, ಹುಬ್ಬಳ್ಳಿ ರಸ್ತೆ, ಚಿಪಗಿ, ನಾರಾಯಣಗುರುನಗರ, ಪ್ರದೇಶಗಳಲ್ಲಿ. ಶಿರಸಿ-2 11 ಕೆ.ವಿ ಮಾರ್ಗದ ಯಲ್ಪಾಪುರ ರಸ್ತೆ, ಎ.ಪಿ.ಎಂ.ಸಿ. & ಟಿ.ಎಸ್.ಎಸ್ ಪ್ರದೇಶಗಳಲ್ಲಿ. ಮಾರಿಕಾಂಬ 11 ಕೆ.ವಿ ಮಾರ್ಗಗದ ಹುಬ್ಬಳ್ಳಿ ರಸ್ತೆ, ಬನವಾಸಿ ರಸ್ತೆ, ಕೋಟೆಕೆರೆ, ಮಾರಿಕಾಂಬ ನಗರ ರಾಮನಬೈಲು, ಕೈಗಾರಿಕಾ ಪ್ರದೇಶ, ಶ್ರೀನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಸೆ. 8 ಬುಧವಾರ ಬೆಳಿಗ್ಗೆ 10ರಿಂದ ಸಾಯಂಕಾಲ 6 ಗಂಟೆವರೆಗೆ ಶಿರಸಿ-1 ಹಾಗೂ ನಿಲೇಕಣಿ 11 ಕೆ.ವಿ ಮಾರ್ಗದ ರಾಘವೇಂದ್ರ ವೃತ್ತ, ಕೋರ್ಟ್ ರಸ್ತೆ, ದೇವಿಕೆರೆ, ಹಳೆ ಬಸ್ ನಿಲ್ದಾಣ, ಕುಮಟಾ ರಸ್ತೆ, ಸಿ.ಪಿ.ಬಜಾರ್ ಮಾರ್ಗದಲ್ಲಿ ವಿದ್ಯುತ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಕಾರಣ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿದ್ದಾರೆ.