ಮುಂಡಗೋಡ: ರೈತನೊಬ್ಬನ ಗೋವಿನ ಜೋಳದ ಬೆಳೆ ಮೇಲೆ ಕಾಡು ಹಂದಿಗಳು ದಾಳಿ ನಡೆಸಿ ಹಾನಿ ಉಂಟು ಮಾಡಿದ ಘಟನೆ ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ಜರುಗಿದೆ.
ಗ್ರಾಮದ ಶಿವಲಿಂಗಪ್ಪ ಕಳಸಗೇರಿ ಎಂಬ ರೈತನ ಬೆಳೆ ಕಾಡು ಹಂದಿಗಳ ದಾಳಿಗೆ ನಾಶವಾಗಿದೆ. ಕಳೆದ ಎರಡು ದಿನಗಳ ಹಿಂದೆ ರಾತ್ರಿ ವೇಳೆ ದಾಳಿ ನಡೆಸಿದ ಕಾಡು ಹಂದಿಗಳ ಹಿಂಡು ಸುಮಾರು 2 ಎಕರೆಯಷ್ಟು ತೆನೆ ಬಿಟ್ಟಿರುವ ಗೋವಿನ ಜೋಳದ ಬೆಳೆಯನ್ನು ತಿಂದು-ತುಳಿದು ಹಾನಿ ಮಾಡಿವೆ. ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಗಿರೀಶ ಕೊಳೇಕರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.