ಶಿರಸಿ: ಚಿಕ್ಕದಾದರೂ ಚುಟುಕುಗಳಿಗೆ ಅಪಾರ ಅರ್ಥ ಕಲ್ಪಿಸುವ ಸಾಮರ್ಥ್ಯವಿದೆ. ಸಾಹಿತ್ಯದ ಸಾಂಗತ್ಯದಿಂದಾಗಿ ನಮ್ಮೊಳಗಿನ ರಾಕ್ಷಸತ್ವ ತೊಲಗಿ ಸಾತ್ವಿಕ ಶಕ್ತಿ ರೂಪುಗೊಳ್ಳುತ್ತದೆ. ಪುಸ್ತಕವಿರದ ಮನೆಯನ್ನು ಅನಕ್ಷರತೆಯ ಗೂಡು ಎನ್ನಬಹುದು. ಚುಟುಕು ಸಾಹಿತ್ಯದ ಒಂದು ಭಾಗ. ಚುಟುಕು ಸಾಹಿತ್ಯ ಕ್ಷೇತ್ರಕ್ಕೆ ದಿನಕರ ದೇಸಾಯಿ ಯವರ ಕೊಡುಗೆ ಅಪಾರ. ಬರವಣಿಗೆ ಮನುಷ್ಯನನ್ನು ವಿಕಾಸದತ್ತ ಕೊಂಡೊಯ್ಯುತ್ತದೆ, ಎಂದು ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಸಾಹಿತಿ ಜಿ.ಜಿ.ಹೆಗಡೆ ಬಾಳಗೋಡ ಹೇಳಿದರು.
ಅವರು ಶಿರಸಿಯ ನೆಮ್ಮದಿ ಕುಟೀರದಲ್ಲಿ ನಡೆದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಈ ರೀತಿಯಾಗಿ ಅಭಿಪ್ರಾಯ ಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಉತ್ತರ ಕನ್ನಡ ಕಾರ್ಯಾಧ್ಯಕ್ಷ ಡಾ.ಜಿ ಎ ಹೆಗಡೆ ಸೋಂದಾ ಕವಿ ಪೆನ್ ಮೋಹನ ಭಟ್ ರವರು ಅಪಾರ ಸಾಹಿತ್ಯಾಸಕ್ತರಾಗಿದ್ದರು. ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಲೇಖಕರಿಗೆ ಪೆನ್ ಕೊಟ್ಟು ಅವರ ಪುಸ್ತಕವನ್ನು ಖರೀದಿಸುತ್ತಿದ್ದರು ಅದು ಅವರ ವಿಶೇಷತೆಯಾಗಿತ್ತು.
ಔದಾರ್ಯದ ಮನಸ್ಥಿತಿ ಹಾಗೂ ಸಂಘಟನೆ ಮಾಡುವ ಚಾತುರ್ಯತೆ ಇರುವವರನ್ನು ತಾಲೂಕಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಹಜವಾಗಿ ಹೊಸ ಘಟಕಕ್ಕೆ ಸವಾಲುಗಳು ಇರುತ್ತದೆ. ಆದರೆ ಘಟಕ ತಟಸ್ಥವಾಗದಂತೆ ನೋಡಿಕೊಳ್ಳಬೇಕು. ಅಧಿಕಾರ ಕೊಟ್ಟಾಗ ಮನುಷ್ಯನ ನಿಜ ಗುಣ ತಿಳಿಯುತ್ತದೆ.
ಕವಿಗಳಿಗೆ, ಸಾಹಿತಿಗಳಿಗೆ ಸಾಕಷ್ಟು ಸ್ವಾತಂತ್ರ್ಯವಿದೆ. ಸಾಹಿತಿಗಳಿಗೆ ಬರೆಯುವಾಗ ಸಾಕಷ್ಟು ಚೌಕಟ್ಟುಗಳು ಇದೆ. ಆದರೆ ಕವಿಗಳು ಸ್ವತಂತ್ರರು, ಸಾಹಿತ್ಯಾಸಕ್ತರು ಹೆಚ್ಚು ಓದುವುದರ ಜೊತೆ ಬರೆಯಬೇಕು. ಆಗ ಸಾಹಿತ್ಯ ದಲ್ಲಿನ ಅಪಾರ ಜ್ಞಾನ ನಮ್ಮದಾಗುತ್ತದೆ. ಒಬ್ಬ ಮನುಷ್ಯ ಉಳಿದವರನ್ನು ಬೆಳೆಸಿದಾಗ ಅವನು ಗೊತ್ತಿಲ್ಲದೇ ಬೆಳೆಯುತ್ತಾನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಶಿರಸಿ ಘಟಕದ ಅಧ್ಯಕ್ಷ ಮಂಜುನಾಥ ಹೂಡ್ಲಮನೆ ವಹಿಸಿದ್ದರು. ಸಾಹಿತಿ ದತ್ತಗುರು ಕಂಠಿ ಉಪಸ್ಥಿತರಿದ್ದರು. ಕವಿಗೋಷ್ಟಿಯಲ್ಲಿ ಕೆ.ಎಸ್.ಅಗ್ನಿಹೋತ್ರಿ, ದಾಕ್ಷಾಯಿಣಿ ಪಿ.ಸಿ, ವಿಮಲ ಭಾಗ್ವತ್, ಮನೋಹರ ಮಲ್ಮನೆ, ರಾಜಲಕ್ಷ್ಮಿ ಭಟ್, ರಾಮಪ್ಪ ಕುಲಟಕರ್, ಡಾ.ದಿವ್ಯಾ ಹೆಗಡೆ, ಪ್ರಜ್ವಲ ಜೋಗಳೇಕರ್, ಅಶ್ವಥ್ ನಾರಾಯಣ, ಭೂಷಣ ಹೆಗಡೆ, ವಿಂದ್ಯಾ ಹೆಗಡೆ, ದಿನೇಶ ಅಮ್ಮೀನಳ್ಳಿ, ಜಿ.ವಿ.ಕೊಪ್ಪಲತೋಟ, ಉಮೇಶ ದೈವಜ್ಞ, ಡಿ.ಎಂ.ಭಟ್, ನೇತ್ರಾವತಿ ಕೆಂಚಗದ್ದೆ, ಭವ್ಯಾ ಹಳೆಯೂರು, ಸಾವಿತ್ರಿ ಶಾಸ್ತ್ರಿ, ರಾಘವೇಂದ್ರ ನಾಯ್ಕ, ಶಿವಪ್ರಸಾದ ಹಿರೇಕೈ, ಶಿವರಾಮ ಹೆಗಡೆ, ರೋಹಿಣಿ ಹೆಗಡೆ, ಭಾರತಿ ಗೌಡ, ಪ್ರತಿಭಾ ನಾಯ್ಕ, ಕೃಷ್ಣ ಪದಕಿ, ಮಹೇಶ ಹನಕೆರೆ, ಎಸ್.ಎಮ್.ಹೆಗಡೆ ಸ್ವಾದಿ , ಫಾಲನೇತ್ರ ಸಜ್ಜನ, ಮಂಜಣ್ಣ ಹೂಡ್ಲಮನೆ ಇವರುಗಳು ತಂತಮ್ಮ ಸ್ವರಚಿತ ಚುಟುಕುಗಳನ್ನು ವಾಚಿಸಿದರು.
ಆರಂಭದಲ್ಲಿ ಶತಾವರಿ ಔಷಧಿ ಸಸ್ಯ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮೊದಲಿಗೆ ರಾಜಲಕ್ಷ್ಮಿ ಭಟ್ ಪ್ರಾರ್ಥಿಸಿದರು. ಕ.ಚು.ಸಾ.ಪ ಕಾರ್ಯದರ್ಶಿ ದಾಕ್ಷಾಯಣಿ ಪಿಸಿ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಭವ್ಯಾ ಹಳೆಯೂರು ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಕವಿ ಕೃಷ್ಣ ಪದಕಿ ವಂದಿಸಿದರು