ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಂಗಸಂಸ್ಥೆಯಾದ ‘ವಿಶ್ವದರ್ಶನ ಸೇವಾ’ ವತಿಯಿಂದ ಸೆ. 12ರಿಂದ ಐದು ದಿನಗಳ ಧ್ಯಾನ ಶಿಬಿರ ನಡೆಸಲು ನಿರ್ಧರಿಸಲಾಗಿದೆ.
ಇಡಗುಂದಿಯ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆ ಆವರದಲ್ಲಿ ಧ್ಯಾನ ಶಿಬಿರ ನಡೆಯಲಿದೆ. ಶಿಬಿರವು ಬೆಳಗ್ಗೆ 5.30ರಿಂದ 7.30ರ ವರೆಗೆ ನಡೆಯಲಿದೆ. ಬೆಂಗಳೂರಿನ ಮಹರ್ಷಿ ವೇದ ವಿಜ್ಞಾನ ಸಂಸ್ಥೆ ಮುಖ್ಯಸ್ಥರಾದ ಅನಂತ ಭಟ್ಟ ಶೀಗೆಪಾಲ್ ಅವರು ಧ್ಯಾನ ತರಬೇತಿ ನೀಡಲಿದ್ದಾರೆ. ಧ್ಯಾನ ಶಿಬಿರದ ನೋಂದಣಿ ಪ್ರಕ್ರಿಯೆ ಶುರುವಾಗಿದ್ದು, ಆಸಕ್ತರು 8747017169 ಅಥವಾ 9886085046 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.