ಕುಮಟಾ: ಗ್ರಾಮೀಣ ಭಾಗವಾದ ಅಳಕೋಡ ವ್ಯಾಪ್ತಿಯ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಸುಮಾರು 15 ಕ್ಕೂ ಹೆಚ್ಚಿನ ಮುಖಂಡರು ಮಾಜಿ ಶಾಸಕಿ ಶಾರದಾ ಶೆಟ್ಟಿ ನೇತ್ರತ್ವದಲ್ಲಿ ಕುಮಟಾ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಈ ವೇಳೆ ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮಾತನಾಡಿ ನಾನು ಶಾಸಕಿ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಳಾಗಿದ್ದಾಗ ಹೆಚ್ಚಿನ ಅನುದಾನ ತಂದು ಅಳಕೋಡ ವ್ಯಾಪ್ತಿಯಲ್ಲಿ ರಸ್ತೆ, ಸೇತುವೆ ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸಿದ್ದೆ.ಅಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು, ಬಡವರ ದೀನದಲಿತರ, ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದರು.ಆದರೆ ಇಂದು, ಕೇವಲ ನಮ್ಮ ಅವಧಿಯಲ್ಲಿ ನಡೆದ ಕಾಮಗಾರಿಗಳನ್ನೇ ಮುಂದುವರೆಸುತ್ತಿದ್ದಾರೆಯೇ ಹೊರತು ಅಭಿವೃದ್ಧಿ ಶೂನ್ಯವಾಗಿದೆ ಎಂದರು.
ಮುಖಂಡರಾದ ಗಜಾನನ ಗಂಗು ಗೌಡ, ರಾಜೀವ ಮಂಜುನಾಥ್ ಗೌಡ,ಕೆ.ಎನ್.ಮಂಜು, ದುರ್ಗೆ ಹಮ್ಮು ಗೌಡ, ಹುಲಿಯಮ್ಮ ಗಂಗು ಗೌಡ, ಸುರೇಶ್ ಎನ್. ಗೌಡ, ಶಿವಾನಂದ ಹೆಚ್. ಗೌಡ, ಕುಸುಮಾಕರ ಎನ್. ಗೌಡ, ಈಶ್ವರ ಎಸ್ ಗೌಡ, ವಿಟ್ಟಪ್ಪ ಮಡಿವಾಳ, ಸುರೇಶ್ ಕೆ. ಗೌಡ, ತಿಮ್ಮಪ್ಪ ನಾಗು ಗೌಡ, ಪ್ರೇಮ ಸುರೇಶ್ ಗೌಡ, ಸಂಜೀವ ಗಣಪು ಗೌಡ ಮುಂತಾದವರನ್ನು ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್.ನಾಯ್ಕ ಪ್ರಸ್ತಾವಿಕ ಮಾತನಾಡಿ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಗೊಂಡ ಪ್ರತಿಯೊಬ್ಬರೂ ಪಕ್ಷದ ಆಧಾರ ಸ್ಥಂಬಗಳು.ಇವರೆಲ್ಲರ ಪರಿಶ್ರಮದಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ನಾಯಕ, ಮುಖಂಡ ರವಿಕುಮಾರ್ ಶೆಟ್ಟಿ, ಅಳಕೋಡ ಘಟಕಾಧ್ಯಕ್ಷ ಎಸ್.ಎಂ.ಭಟ್, ಅಳಕೋಡ ಪಂಚಾಯತಿ ಮಾಜಿ ಅಧ್ಯಕ್ಷ ಕೃಷ್ಣಾನಂದ ವೆರ್ಣೇಕರ್, ಯುವ ಮುಖಂಡ ಭುವನ್ ಭಾಗ್ವತ್, ಸುರೇಖಾ ವಾರೇಕರ್, ಮುಜಾಫರ್ ಸಾಬ್,ವಿನಾಯಕ ಅಂಬಿಗ, ಜಗದೀಶ್ ನಾಯ್ಕ ಮುಂತಾದವರು ಹಾಜರಿದ್ದರು.