ಮುಂಡಗೋಡ: ತಾಲೂಕಿನ ಇಂದೂರ ಗ್ರಾಮದ ಕಿಚ್ಚ ಸುದೀಪ್ ಅಭಿಮಾನಿ ಬಳಗದ ವತಿಯಿಂದ ಗ್ರಾಮದ ಸದ್ಗುರು ಶರೀಫ ಶಿವಯೋಗಿಗಳ ದೇವಸ್ಥಾನದಲ್ಲಿ ಸುದೀಪ್ ಹುಟ್ಟುಹಬ್ಬವನ್ನು ಗುರುವಾರ ಆಚರಿಸಲಾಯಿತು.
ಆರಂಭದಲ್ಲಿ ಗುರು ಗೋವಿಂದ-ಶರೀಫರ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು. ನಂತರ ತಾಲೂಕಿನ ಅಗಡಿ ಗ್ರಾಮದ ನಿವೃತ್ತ ಯೋಧ ಸೋಮಶೇಖರ ಲಮಾಣಿ, ಇಂದೂರಿನ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಸಹದೇವಪ್ಪ ನಡಿಗೇರ, ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಕ ಆನಂದಗೌಡ್ರು ಪಾಟೀಲ, ಪಶು ವೈದ್ಯ ಜಯಚಂದ್ರ ಕೆಂಪಶಿ, ಅರಣ್ಯ ರಕ್ಷಕ ಉರಗತಜ್ಞ ಶ್ರೀಧರ ಭಜಂತ್ರಿ ಇವರನ್ನು ಸನ್ಮಾನಿಸಲಾಯಿತು.
ಮಂಜುನಾಥ ನಡಿಗೇರ, ಉಪವಲಯ ಅರಣ್ಯಾಧಿಕಾರಿ ಶ್ರೀಕಾಂತ ವೆರ್ಣೇಕರ, ರಮೇಶ ಸಜ್ಜನ, ಬಸವರಾಜ ಸಂಗಮೇಶ್ವರ, ಮಹದೇವಪ್ಪ ನಡಿಗೇರ, ಗಂಗಾಧರ ಬಡಿಗೇರ, ನಿಂಗಯ್ಯ ಸುರಗಿಮಠ, ಮಂಜುನಾಥ ತೆಂಬದಮನಿ ಮುಂತಾದವರು ಉಪಸ್ಥಿತರಿದ್ದರು.