ಯಲ್ಲಾಪುರ: ಪ್ರಸಕ್ತ SSLC ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ನಾಮಧಾರಿ ಸಮಾಜದ ವಿದ್ಯಾರ್ಥಿಗಳಿಗೆ ಶ್ರೀ ಗುರು ಸಹಕಾರಿ ಸಂಘ ಪ್ರತಿಭಾ ಪುರಸ್ಕಾರ ನೀಡಲಿದೆ.
ಎಸ್ಎಸ್ಎಲ್ಸಿಯಲ್ಲಿ ಶೇ.90 ಕ್ಕಿಂತ ಹೆಚ್ಚಿಗೆ ಅಂಕ ಪಡೆದವರಿಗೆ ಮತ್ತು ಪಿಯುಸಿಯಲ್ಲಿ ಶೇ.80 ಕ್ಕಿಂತ ಹೆಚ್ಚಿಗೆ ಅಂಕ ಪಡೆದ ತಾಲೂಕಿನ ನಾಮಧಾರಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.
ವಿದ್ಯಾರ್ಥಿಗಳು ಅಧಿಕೃತ ದಾಖಲೆಯನ್ನು, ಅಧ್ಯಕ್ಷರು, ಶ್ರೀ ಗುರು ಸಹಕಾರ ಸಂಘ,
ದೇವಿ ಮೈದಾನ ಹತ್ತಿರ, ಯಲ್ಲಾಪುರ (ಉ. ಕ ) ಈ ವಿಳಾಸಕ್ಕೆ ಸೆಪ್ಟೆಂಬರ್ 15 ರ ಒಳಗೆ ಕಳುಹಿಸುವಂತೆ ಅಧ್ಯಕ್ಷ ರವಿ ನಾಯ್ಕ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.